04 Apr 2018
ರಾಮನಗರ: ತಾವರೆಕೆರೆಯ ಗುಲಗಂಜನಹಳ್ಳಿಯಲ್ಲಿ ಜನರಲ್ಲಿ ಆತಂಕ ಮೂಡಿಸಿರೋ ಚಿರತೆಗಳಲ್ಲಿ ಒಂದು ಚಿರತೆ ಬೋನಿಗೆ ಬಿದ್ದಿದೆ. ಎರಡು ದಿನಗಳ ಹಿಂದೆ ಬೋನಿಗೆ ನಾಯಿ ಕಟ್ಟಿ ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಪ್ಲಾನ್ ಮಾಡಿದ್ದರು. ಸೆರೆ ಸಿಕ್ಕ ಚಿರತೆಯನ್ನು ಕಲೀಪುರ ಸುಲಿಕೆರೆ ಅರಣ್ಯ ಘಟಕಕ್ಕೆ ಅರಣ್ಯ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಇನ್ನೂ ಎರಡು ಚಿರತೆ ಇರೋ ಬಗ್ಗೆ ಗ್ರಾಮಾಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.