‘ಮೇಘನಾಗೆ ಚಿರು ರಣವೀರ್ ಸಿಂಗ್ ಇದ್ದಂತೆ’

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್ ಚಿರಂಜೀವಿ ಸರ್ಜಾ, ಮೇಘನಾ ಚಿರು ಮದ್ವೆಯಾದ್ಮೇಲೆ ಮೊದಲ ಬಾರಿಗೆ ಸಂದರ್ಶನದಲ್ಲಿ ಮನಬಿಚ್ಚಿ ಮಾತಾಡಿದ್ರು. ಅದ್ರಲ್ಲೂ ಮೇಘನಾ ಇತ್ತ ಕ್ಯೂಟ್ ಆಗಿ ಪ್ರಶ್ನೆಗಳ ಸುರಿಮಳೆಗೈತಿದ್ರೆ, ಅತ್ತ ಚಿರು ನಗುನಗುತ್ತಾ ಮನದುಂಬಿ ಉತ್ತರ ನೀಡ್ತಿದ್ರು.

ಸದ್ಯ ಸಿಂಗ ಆಗಿ ತೆರೆಮೇಲೆ ಅಬ್ಬರಿಸೋಕೆ ರೆಡಿಯಿರೋ ಚಿರುಸರ್ಜಾ ಶ್ಯಾನೆ ಟಾಪಾಗೌಳೆ ನಮ್ ಹುಡುಗಿ ಅಂದ್ರೆ, ಮೇಘನಾ ಕೂಡ ಶಾನೆ ಟಾಪಾಗೌನೆ ನನ್ ಹುಡುಗ ರಣವೀರ್ ಸಿಂಗ್ ಹಂಗೆ.. ಅಂದ್ರು.

ಬಾಲಿವುಡ್‌ ರಣವೀರ್‌ ಸಿಂಗ್ ತಮ್ಮ ವಿಭಿನ್ನ ಮ್ಯಾನರಿಸಂ, ಸ್ಟೈಲ್, ಗೆಟಪ್‌ಗಳಿಂದಲೇ ಸಖತ್ ಫೇಮಸ್. ಸದ್ಯ ರಿಲೀಸ್ ಆಗಿ ಸೆನ್ಸೇಷನಲ್ ಹಿಟ್ ಆಗಿರೋ ಸಿಂಗ ಚಿತ್ರದ ಶ್ಯಾನೆ ಟಾಪಾಗೌಳೆ ಲಿರಿಕಲ್ ಹಾಡಲ್ಲಿ ಚಿರಂಜೀವಿ ಸರ್ಜಾ ಸ್ಟೈಲ್, ಕಾಸ್ಟ್ಯೂಮ್ ಕಾಂಬಿನೇಶನ್, ಗೆಟಪ್ ಇದೆಲ್ಲವೂ ಬಾಲಿವುಡ್‌ನ ರಣ್ವೀರ್‌ ಸಿಂಗ್‌ ನಂತೇ ಕಾಣುತ್ತೆ. ಹಿಂದಿಯಲ್ಲಿ ರಣ್ವೀರ್ ಕಾಂಪ್ಲಿಕೇಡೆಡ್ ಕಾಂಬಿನೇಶನ್ಸ್ ತೊಡ್ತಾರೆ. ಅದೇ ಇಲ್ಲಿ ಚಿರು ಇದನ್ನ ಕ್ಯಾರಿ ಮಾಡ್ತಿದ್ದಾರೆ ಅಂತಾರೆ ಮೇಘನಾ. ಇದು ನಾನ್ ಕೇಳಿಪಟ್ಟ ಮಾತು. ತುಂಬಾ ಜನ ನಿನ್ನ ರಣ್ವೀರ್ ಸಿಂಗ್, ರಣ್ವೀರ್ ಸಿಂಗ್ ಅಂತಾ ಕರೀತಿದ್ದಾರೆ. ಅದ್ರಲ್ಲೂ ನಂಗೊತ್ತಿರೋ ಹುಡುಗೀರೆಲ್ಲಾ ಚಿರು ಸರ್ಜಾ ನೋಡೋಕೆ ಥೇಟ್ ರಣ್ವೀರ್‌ ಸಿಂಗ್ ನೋಡ್ದಂಗಾಗ್ತಿದ್ಯಲ್ಲ.! ಅಂತಾ ನನ್ನ ಕೇಳ್ತಿದಾರೆ. ಏನಿದರ ಗುಟ್ಟು ಅಂತಾ ಕೇಳಿದ್ರು.
ಇದ್ರಿಂದ ನಾಚಿ ನೀರಾದ ಚಿರು.. ಥ್ಯಾಂಕ್ಸ್. ಇದು ನನಗೆ ಕಾಂಪ್ಲಿಮೆಂಟ್.. ಮೊದಲಿಂದಲೂ ನನಗೆ ಕಾಮನ್ ಅಲ್ಲದ ಡಿಫ್ರೆಂಟ್ ಆದ ಅನುಯೂಶುವಲ್ ಕ್ಲಾಥಿಂಗ್ ಇಷ್ಟ ಅಂದ್ರು.