ಚಿನ್ನಸ್ವಾಮಿ ಬಾಂಬ್​ ಸ್ಫೋಟ ಪ್ರಕರಣ: ಮೂವರಿಗೆ ಏಳು ವರ್ಷ ಜೈಲು

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಗೋಹಾರ್ ಅಜೀಜ್ ಗೋಮೆನಿ, ಕಮಲ್ ಹಸನ್ ಹಾಗು ಮೊಹಮದ್ ಕಪಿಲ್ ಅಕ್ತರ್ ಗೆ ಏಳು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಸೇರಿ 7 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಿ 50 ನೇ ಸೆಷನ್ಸ್ ನ್ಯಾ. ಸಿದ್ದಲಿಂಗಪ್ರಭು ಅವರು ಇದೀಗತಾನೆ ಆದೇಶ ನೀಡಿದ್ದಾರೆ.

ಎಸ್​ಪಿಪಿಯಾಗಿ ರವೀಂದ್ರ ವಾದ ಮಂಡಿಸಿದ್ದರು. ಇದೇ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಸೇರಿ 13 ಮಂದಿ ಆರೋಪಿಗಳಿದ್ದಾರೆ. ಇವರಲ್ಲಿ ಮೇಲಿನ ಮೂವರೂ ಆರೋಪಿಗಳು ತಾವು ತಪ್ಪು ಮಾಡಿದ್ದಾಗಿ ಕೋರ್ಟ್ ಮುಂದೆ ಒಪ್ಪಿಕೊಂಡ ಹಿನ್ನೆಲೆ ಶಿಕ್ಷೆ ಪ್ರಕಟವಾಗಿದೆ.