ಭಾರತಕ್ಕೆ ಎಸ್​-400 ಮಿಸೈಲ್ಸ್​​, ಥರ ಥರ ನಡುಗಿದ ಪಾಕ್​ಗೆ ಚೀನಾ ಕೊಡುಗೆ..!

ಬೀಜಿಂಗ್​: ಭಾರತವು ರಷ್ಯಾದ ಎಸ್​-400 ಟ್ರಯಂಫ್ ಹೆಸರಿನ ಅತ್ಯಾಧುನಿಕ ಏರ್‌ ಮಿಸೈಲ್​ಗಳ ಖರೀದಿಗೆ ಅಂಕಿತ ಹಾಕಿದ್ದೇ ತಡ ಅತ್ತ ಚೀನಾ ಕಣ್ಣು ಕೆಂಪಗಾಗಿದೆ. ತತ್ಫಲವಾಗಿ ಚೀನಾ ಮತ್ತು ಪಾಕಿಸ್ತಾನ ಮಧ್ಯೆ ದೊಡ್ಡ ಮಟ್ಟದ ಸೇನಾ ಡೀಲ್​ ನಡೆದಿದೆ. ಪಾಕ್​ ಸೇನೆಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸರಬರಾಜು ಮಾಡುವ ಚೀನಾ, ಈ ಬಾರಿ ಭಾರತದ ವಿರುದ್ಧ ಜಿದ್ದಿಗೆ ಬಿದ್ದಂತೆ ಇನ್ನೂ ದೊಡ್ಡ ಪ್ರಮಾಣದಲ್ಲಿ 48 ಹೈ-ಎಂಡ್​ ಡ್ರೋನ್​ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. 6 ಲೇಸರ್​ ನಿರ್ದೇಶಿತ ಮಿಸೈಲ್​ಗಳನ್ನು ಈ ಸೇನಾ ಡ್ರೋನ್​ಗಳು ತನ್ನ ಬತ್ತಳಿಕೆಯಲ್ಲಿ ಹೊತ್ತೊಯ್ಯಬಹುದಾಗಿದೆ.

ಎಲ್ಲ ಹವಾಮಾನಗಳಲ್ಲೂ ಕಾರ್ಯನಿರ್ವಹಿಸುವಂತಹ ಈ 48 ಸೇನಾ ಡ್ರೋನ್​ಗಳ ಬೆಲೆ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಚೀನಾ ಯಾವಾಗ ಈ ಡ್ರೋನ್​ಗಳನ್ನು ಪಾಕ್​ಗೆ ಸರಬರಾಜು ಮಾಡಲಿದೆ ಎಂಬುದೂ ಇನ್ನೂ ಬಹಿರಂಗಪಡಿಸಿಲ್ಲ. ಆದ್ರೆ ಕಳೆದ ಫೆಬ್ರವರಿಯಲ್ಲಿ ಚೀನಾ ಈ ಅತ್ಯಾಧುನಿಕ ಡ್ರೋನ್​ಗಳನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಿತ್ತು.