ಮಕ್ಕಳ ಕಳ್ಳ ಎಂದುಕೊಂಡು ಉತ್ತರಪ್ರದೇಶದ ಯುವಕನಿಗೆ ಥಳಿತ

ಚಾಮರಾಜನಗರ: ಮಕ್ಕಳ ಕಳ್ಳರ ವದಂತಿ ಕುರಿತು ಪೊಲೀಸರು ಎಷ್ಟೇ ಜಾಗೃತಿ ಅಭಿಯಾನ ಕೈಗೊಂಡಿದ್ದರೂ ಅನುಮಾನಾಸ್ಪದರ ನಡೆಯುತ್ತಿರುವ ಹಲ್ಲೆ ನಿಂತಿಲ್ಲ. ಇದೀಗ ಇಂತಹುದೆ ಒಂದು ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮಕ್ಕಳ ಕಳ್ಳರೆಂದು ತಿಳಿದುಕೊಂಡು, ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಿನ್ನೆ ಚಾಮರಾಜನಗರದಲ್ಲಿ ನಡೆದಿದೆ. ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಹಲ್ಲೆಗೊಳಗಾದ ವ್ಯಕ್ತಿ ಅನುರ್​ (24)ಎಂದು ತಿಳಿದು ಬಂದಿದ್ದು, ಕಳೆದ ಹತ್ತು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ರಾಜ್ಯಕ್ಕೆ ಬಂದಿದ್ದನಂತೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv