ಮಳೆ ಕಡಿಮೆಯಾದ ಮೇಲೆ ಇಲ್ಲಿಗೆ ಪ್ರವಾಸಕ್ಕೆ ಬರುವುದು ಒಳ್ಳೆಯದ್ದು..!

chikmagalur,district, rain, creates havoc,

ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಗೆ ಪ್ರವಾಸಕ್ಕೆ ಬರೋ ಪ್ಲಾನ್ ಇದ್ರೆ ನಿಮ್ಮ ಟ್ರಿಪ್ಪನ್ನ, ಸ್ವಲ್ಪ ದಿನ ಮುಂದೂಡೋದು ಒಳ್ಳೆಯದು. ಯಾಕಂದ್ರೆ, ಕಾಫಿನಾಡಿನ ಗಿರಿಭಾಗದಲ್ಲಿ ಮಳೆ ಸುರಿಯುತ್ತಲೇ ಇದೆ. ಭಾರೀ ಮಳೆಯಿಂದ ಅಲ್ಲಲ್ಲೇ ಗುಡ್ಡ ಕುಸಿತ ಉಂಟಾಗ್ತಿದೆ, ಎತ್ತರದ ಪ್ರದೇಶದ ಸಣ್ಣ-ಸಣ್ಣ ಕಲ್ಲು ಮಿಶ್ರಿತ ಕೆಮ್ಮಣ್ಣು ರಸ್ತೆಗೆ ಬೀಳ್ತಿದೆ.ಈ ಮಣ್ಣಿನಿಂದ ಗಾಡಿಗಳು ಹೆಚ್ಚಾಗಿ ಸ್ಕಿಡ್ ಆಗುತ್ತವೆ.
ಸಾಲದ್ದಕ್ಕೆ ಅಲ್ಲಲ್ಲೇ ರಸ್ತೆ ಬದಿಯ ಮಣ್ಣು ಕೂಡ ಕುಸಿಯುತ್ತಿದೆ. ಕಳೆದೆರಡು ದಿನಗಳಿಂದ ಮೂರ್ನಾಲ್ಕು ಕಡೆ ಗುಡ್ಡ ಕುಸಿದಿದೆ. ಕೆಲ ದಿನಗಳ ಹಿಂದೆ ಕೂದಲೆಳೆ ಅಂತರದಲ್ಲಿ ಪ್ರವಾಸಿ ಮಿನಿ ಬಸ್ಸೊಂದು ರಸ್ತೆಯಲ್ಲಿ ಜಾರಿ ಪಾರಾಗಿತ್ತು. ಇನ್ನ ಕೆಲವೆಡೆ ರಸ್ತೆ ಕೂಡ ಕಿರಿದಾಗಿದ್ದು ವಾಹನಗಳು ತುಂಬಾ ಎಚ್ಚರದಿಂದ ಸಂಚರಿಸಬೇಕಾಗಿದೆ. ಸ್ಥಳಿಯರು ಹಾಗೂ ವಾಹನ ಚಾಲಕರು ಮಣ್ಣು ಕುಸಿಯುತ್ತಿರೋ ಜಾಗಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ಕಲ್ಲುಗಳನ್ನ ಜೋಡಿಸಿಟ್ಟು ಪ್ರವಾಸಿಗರಿಗೆ ಎಚ್ಚರಿಕೆ ನೀಡ್ತಿದ್ದಾರೆ.
ಕೆಲವೆಡೆ ಪೊಲೀಸ್ ಇಲಾಖೆ ಕೂಡ ಗುಡ್ಡ ಕುಸಿದ ಸ್ಥಳದಲ್ಲಿದ್ದು ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಿ ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ್ದಾರೆ. ಆದರೆ, ಮಳೆಗಾಲದಲ್ಲಿ ಚಿಕ್ಕಮಗಳೂರು ತುಂಬಾ ಚೆನ್ನಾಗಿರುತ್ತೆಂದು ಸಾಕಷ್ಟು ಪ್ರವಾಸಿಗರು ಬರ್ತಿದ್ದಾರೆ. ಕಾಫಿನಾಡಿನ ಗಿರಿಭಾಗ ಇನ್ನೂ ಮೂರ್ನಾಲ್ಕು ತಿಂಗಳು ಇದೇ ಮಾದರಿಯಲ್ಲಿರುತ್ತೆ. ಇಲ್ಲಿಗೆ ಪ್ರವಾಸಕ್ಕೆ ಬರೋರು ಸ್ವಲ್ಪ ದಿನ ಬಿಟ್ಟು, ಮಳೆ ಕಡಿಮೆಯಾದ ಮೇಲೆ ಪ್ರವಾಸಕ್ಕೆ ಬರುವುದು ಒಳ್ಳೆಯದ್ದು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv