‘ನಿನ್ನೆ ವೇದಿಕೆಯನ್ನ ಮೋದಿ ಕೊಳಕು ಮಾಡಿ ಹೋಗಿದ್ರು, ನಾವು ಸ್ವಚ್ಛ ಮಾಡಲು ಬಂದಿದ್ದೇವೆ’

ಮೈಸೂರು: ನಿನ್ನೆ ಈ ವೇದಿಕೆಯನ್ನ ಕೊಳಕು ಮಾಡಿ ಹೋಗಿದ್ರು, ನಾವು ಸ್ವಚ್ಛ ಮಾಡಲು ಬಂದಿದ್ದೇವೆ ಎಂದು ಪ್ರಧಾನಿ ಮೋದಿ ವಿರುದ್ಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ದ್ವಾರಕನಾಥ್ ವ್ಯಂಗ್ಯವಾಡಿದ್ದಾರೆ.

‘ಮಾಯಾವತಿ ಪ್ರಧಾನಿ ಆಗ್ತಾರೆ, ಕಾಂಗ್ರೆಸ್​ನಿಂದ ತಡೆಯಲು ಸಾಧ್ಯವಿಲ್ಲ’
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ  ನಡೆಯುತ್ತಿರುವ ಬಿಎಸ್ಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಿನ್ನೆ ಮೋದಿ ವಿಶ್ವೇಶ್ವರಯ್ಯ ಹೆಸರು ಪ್ರಸ್ತಾಪ ಮಾಡಿದ್ದಾರೆ. ನಾನು ಅದನ್ನು ಸ್ವಾಗತ ಮಾಡುತ್ತೇವೆ. ನಾನು ಈಗ ಟಿಪ್ಪು ಸುಲ್ತಾನ್ ಹೆಸರನ್ನು, ನಾಲ್ವಡಿ ಕೃಷ್ಣರಾಜ ಅವರ ಹೆಸರನ್ನು ಸಹ ಪ್ರಸ್ತಾಪ ಮಾಡ್ತೀನಿ. ನಾನು 30 ವರ್ಷಗಳಿಂದ ಬಿಎಸ್ಪಿ ಚಳುವಳಿಯಲ್ಲಿದ್ದೆ. ಈಗ ರಾಜಕೀಯಕ್ಕೆ ಬಂದಿದ್ದೇನೆ. ಅಭ್ಯರ್ಥಿಯೂ ಆಗಿದ್ದೇನೆ ಎಂದು ಹೇಳಿದ್ರು. ಇದೇ ವೇಳೆ ಬಿಎಸ್ಪಿ ಅಧಿನಾಯಕಿ  ಮಾಯಾವತಿ ಅವರು ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅದನ್ನು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv