ನೋಡಲ್ ಅಧಿಕಾರಿ ನೇಮಕ, ವಿಶೇಷಾಧಿಕಾರಿ-ಮೃತರ ಸಂಬಂಧಿಕರು ಶ್ರೀಲಂಕಾಗೆ ಪ್ರಯಾಣ

ಬೆಂಗಳೂರು: ಕರ್ನಾಟಕದಿಂದ ಪ್ರವಾಸಕ್ಕೆಂದು ಕೊಲೊಂಬೋಗೆ ತೆರಳಿದ್ದವರ ಪೈಕಿ ಕೆಲವರು ಬಾಂಬ್ ದಾಳಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಒಬ್ಬ ವಿಶೇಷಾಧಿಕಾರಿ ಹಾಗೂ ಮೃತರ ಸಂಬಂಧಿಕರನ್ನು ಶ್ರೀಲಂಕಾಗೆ ಕಳುಹಿಸುವ ಏರ್ಪಾಡು ಮಾಡಿದೆ ಅಂತಾ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಕೊಲಂಬೋದಲ್ಲಿ ನಾಪತ್ತೆಯಾಗಿದ್ದ 7 ಕನ್ನಡಿಗರ ಪೈಕಿ ಐವರು ಮೃತಪಟ್ಟಿದ್ದಾರೆ. ಏಳು ಕನ್ನಡಿಗರು ಶಾಂಗ್ರೀಲಾ ಹೊಟೇಲ್ ನಲ್ಲಿದ್ದರು. ಅದ್ರಲ್ಲಿ ಐವರು ಮೃತ ಪಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಉಳಿದ ಇಬ್ಬರ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಈಗಾಗಲೇ ಭಾರತೀಯ ಹೈಕಮೀಷನರ್ ಜೊತೆ ಮಾತನಾಡಿ, ಮೃತರ ಶವಗಳನ್ನ ಕಳಿಸುವ ಬಗ್ಗೆ ಮನವಿ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶೇಷಾಧಿಕಾರಿಯನ್ನ ನೇಮಿಸಿದ್ದೇವೆ. ವಿಶೇಷಾಧಿಕಾರಿ ರಮೇಶ್ ಬಾಬು ಅವ್ರು ಕೊಲೊಂಬೋಗೆ ಹೋಗಿದ್ದಾರೆ. ರಾಜ್ಯದ ಪ್ರವಾಸಿಗರ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಜೊತೆಗೆ ಅಂಜುಂ ಪರ್ವೇಜ್ ಅವರನ್ನ ನೋಡಲ್ ಅಧಿಕಾರಿಯಾಗಿ ಮಾಡಿದ್ದೇವೆ. ಅಲ್ಲದೇ, ಮೃತರ ಸಂಬಂಧಿಕರು ಕೂಡ ಶ್ರೀಲಂಕಾಗೆ ತೆರಳ್ತಿದ್ದಾರೆ ಅಂತಾ ತಿಳಿಸಿದರು. ಇದೇ ವೇಳೆ, ಹೆಚ್ಚಿನ ಪ್ರವಾಸಿಗರು ಶ್ರೀಲಂಕಾಗೆ ಹೋಗಿರುವ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದೇವೆ. ಶ್ರೀಲಂಕಾದ ಕ್ಯಾಂಡಿಗೆ ಪ್ರವಾಸಕ್ಕೆ ಹೋಗಿದ್ದ ಕನ್ನಡಿಗರು ಸುರಕ್ಷಿತವಾಗಿದ್ದು, ಇದೀಗ ಅಲ್ಲಿಂದ ವಾಪಸಾಗುತ್ತಿದ್ದಾರೆ. ಆದರೆ ಶಾಂಗ್ರಿಲಾ ಹೊಟೇಲ್ ನಲ್ಲಿದ್ದ ಏಳು ಮಂದಿ ಮಾತ್ರ ಅಂತಾ ವಿಜಯಭಾಸ್ಕರ್ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv