ಮಂಡ್ಯದ ಯುವ ವಿಜ್ಞಾನಿ ಎನ್.ಎಂ. ಪ್ರತಾಪ್​ನನ್ನು ಸನ್ಮಾನಿಸಿದ ಸಿಎಂ

ಬೆಂಗಳೂರು: ಮಂಡ್ಯದ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್​ನನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸನ್ಮಾನಿಸಿದ್ದಾರೆ. ಇಂದು ನಗರದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರ್​ಗಳ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ 2019ರ ತಾಂತ್ರಿಕ ದಿನಚರಿಯನ್ನು ಬಿಡುಗಡೆ ಮಾಡಿದರು. ಬಳಿಕ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್ ಹಾಗೂ ಅವರ ಪೋಷಕರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಡಾ. ಸೆಲ್ವಕುಮಾರ್ ಹಾಜರಿದ್ದರು.