ಎತ್ಕೋಳ್ರೋ ಕೋಳಿ.. ಎತ್ಕೋಳ್ರೋ ಕೋಳಿ: ಸತ್ತ ಕೋಳಿಗಾಗಿ ಮುಗಿಬಿದ್ದ ಜನರು!

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ನೆಲಮಂಗಲ ಸಮೀಪದ ಮೂಡಲಪಾಳ್ಯ ಬಳಿ ನಡೆದಿದೆ. ಕೋಳಿ ತುಂಬಿದ್ದ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಬಿದ್ದಿತ್ತು. ಲಾರಿ ಪಲ್ಟಿ ಹೊಡೆದ ಕಾರಣದಿಂದ ನೂರಾರು ಕೋಳಿಗಳು ಸಾವನ್ನಪ್ಪಿವೆ. ಇನ್ನು, ಸ್ಥಳೀಯರು ಸತ್ತ ಕೋಳಿಗಾಗಿ ಮುಗಿಬಿದ್ದರು. ಸತ್ತ ಕೋಳಿಗಳನ್ನು ತೆಗೆದುಕೊಂಡು ಹೋದರು. ಕೆಲ ಸಮಯ ಕೋಳಿಗಾಗಿ ಜನರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಘಟನೆಯಲ್ಲಿ ಚಾಲಕ ಸೇರಿ ನಾಲ್ಕು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ನೆಲಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.