ಎಳ್ಳು ಅಂತ ಮುಖ ಕಹಿ ಮಾಡದಿರಿ, ಇದ್ರಲ್ಲೇ ಅಡಗಿದೆ ಆರೋಗ್ಯ ಭಾಗ್ಯ..!

ಎಳ್ಳು ಅಂದ ಕೂಡಲೇ ನೆನಪಾಗೋದು ರುಚಿ ರುಚಿಯಾದ ಎಳ್ಳುಂಡೆ. ಸಾಮಾನ್ಯವಾಗಿ ಸಿಹಿ ತಿಂಡಿಗಳನ್ನು ತಯಾರಿಕೆಯಲ್ಲಿ ಎಳ್ಳನ್ನು ಉಪಯೋಗ ಮಾಡಿದರೆ ಸಿಹಿ ತಿಂಡಿ ಮತ್ತಷ್ಟು ರುಚಿಕರವಾಗಿರುತ್ತೆ. ಎಳ್ಳನ್ನು ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಒಂದು ಸ್ಪೂನ್​​ ಎಳ್ಳಿನಲ್ಲಿ 69ರಷ್ಟು ಕ್ಯಾಲೊರಿ, 4 ಗ್ರಾಂ ನಷ್ಟು ಕೊಬ್ಬು, 2 ಗ್ರಾಂ ನಷ್ಟು ಪ್ರೊಟೀನ್ ಮತ್ತು 5 ಗ್ರಾಂ ಫೈಬರ್ ಪ್ರಮಾಣ ಹೊಂದಿರುತ್ತದೆ. ಹೆಚ್ಚಾಗಿ ಸಲಾಡ್​, ಸ್ಮೂತೀಸ್​ ಮತ್ತು ಸಿಹಿ ತಿಂಡಿಗಳಲ್ಲಿ ಎಳ್ಳನ್ನು ಉಪಯೋಗ ಮಾಡ್ತಾರೆ.

ಎಳ್ಳಿಂದಾಗುವ ಆರೋಗ್ಯಕರ ಉಪಯೋಗಗಳು

1. ಫೈಬರ್​
ಒಂದು ಸ್ಪೂನ್​ ಎಳ್ಳಿನಲ್ಲಿ ಸುಮಾರು 20ಗ್ರಾಂನಷ್ಟು ಫೈಬರ್​ ಪ್ರಮಾಣವಿದೆ. ಆಹಾರ ಪದಾರ್ಥದಲ್ಲಿ ಎಳ್ಳನ್ನು ಉಪಯೋಗಿಸುವುದರಿಂದ ಇದು ಕೊಲೆಸ್ಟ್ರಾಲ್​ ಪ್ರಮಾಣವನ್ನು ಕಡಿಮೆ ಮಾಡುತ್ತೆ. ಜೊತೆಗೆ ಜೀರ್ಣಕ್ರೀಯೆಗೂ ಸಹಕಾರಿಯಾಗಿದೆ.

2. ಮೂಳೆಗಳು ಸ್ಟ್ರಾಂಗ್‌ ಆಗುತ್ವೆ
ಕ್ಯಾಲ್ಸಿಯಂ ಜೊತೆಗೆ, ಆರೋಗ್ಯಕ್ಕೆ ಉತ್ತಮ ಸ್ಥಿತಿಯಲ್ಲಿ ಉಳಿಯಲು ನಿಮ್ಮ ಎಲುಬುಗಳಿಗೆ ಫಾಸ್ಫರಸ್ ಮತ್ತು ಮೆಗ್ನೀಶಿಯಂ ಅಗತ್ಯವಿರುತ್ತದೆ. ಒಂದು ಚಮಚ ಎಳ್ಳಿನಲ್ಲಿ 122 ಮಿ.ಗ್ರಾಂ ಫಾಸ್ಫರಸ್ ಮತ್ತು 47 ಮಿ.ಗ್ರಾಂ ಮೆಗ್ನೀಶಿಯಂ ಅಂಶವನ್ನು ಹೊಂದಿರುತ್ತದೆ. ಆದ್ರಿಂದ ಆಹಾರದಲ್ಲಿ ಸಾಧ್ಯವಾದಷ್ಟು ಎಳ್ಳನ್ನು ಉಪಯೋಗಿಸಿದರೆ ಉತ್ತಮ.

3. ಪ್ರೋಟಿನ್​ ಪ್ರಮಾಣ ಹೆಚ್ಚಾಗಿರುತ್ತೆ
ಸಾಮಾನ್ಯವಾಗಿ ಮಾಂಸಾಹಾರಗಳಲ್ಲಿ ಮಾತ್ರ ಪ್ರೊಟೀನ್​ ಪ್ರಮಾಣ ಹೆಚ್ಚಾಗಿರುತ್ತೆ. ಸಸ್ಯಾಹಾರಿಗಳು ಎಳ್ಳನ್ನು ಆಹಾರ ಪದಾರ್ಥಗಳಲ್ಲಿ ಬಳಸೋದ್ರ ಮೂಲಕ ಸಾಕಷ್ಟು ಪ್ರಮಾಣದ ಪ್ರೊಟೀನ್​ ಪಡೆಯಬಹುದು. ಜೊತೆಗೆ ಎಳ್ಳು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತೆ.

4. ದೇಹವನ್ನು ಹೈಡ್ರೇಟ್​ ಆಗಿರಿಸಲು ಸಹಕಾರಿ
ಅಥ್ಲೆಟಿಕ್​ಗಳು ಓಟದ ಮೊದಲು ಎಳ್ಳು ಜ್ಯೂಸ್​ ಕುಡಿದರೆ ಉತ್ತಮ. ಯಾಕಂದ್ರೆ ಇದು ದೇಹದಲ್ಲಿ ನೀರಿನಾಂಶವನ್ನ ಸಾಕಷ್ಟು ಪ್ರಮಾಣದಲ್ಲಿ ಶೇಖರಿಸುತ್ತೆ. 1 ಗ್ರಾಂ ಎಳ್ಳಿನಲ್ಲಿ ಸುಮಾರು 12 ಗ್ರಾಂನಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಇರುತ್ತೆ.

5. ಕ್ಯಾಲ್ಸಿಯಂ
ಎಳ್ಳಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇದೆ. ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಿಸಲು ಹಾಲು ಅಥವಾ ಮೊಸರಿನೊಂದಿಗೆ ಎಳ್ಳನ್ನು ಬೆರೆಸಿ ಸೇವಿಸಿರಿ.

6. ಮಧುಮೇಹ ಕಡಿಮೆ ಮಾಡುತ್ತೆ
ಇದು ರಕ್ತದೊತ್ತಡವನ್ನ ಕಡಿಮೆ ಮಾಡೋದ್ರ ಜೊತೆಗೆ ರೋಗಿಗಳ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನ ಗಣನೀಯವಾಗಿ ಕಡಿಮೆ ಮಾಡುತ್ತೆ. ಡಯಾಬಿಟಿಸ್​ ರೋಗಿಗಳ ಆಹಾರದಲ್ಲಿ ಎಳ್ಳನ್ನು ಸೇರಿಸಿದರೆ ಉತ್ತಮ.

ವಿಶೇಷ ಬರಹ – ಶ್ವೇತಾ ಪೂಜಾರಿ