ಮನವಿಗೆ ಸ್ಪಂದಿಸಿದ ಭಾರತೀಯರಿಗೆ ಚೇಟ್ರಿ ಗೆಲುವಿನ ಉಡುಗೊರೆ

ಭಾರತದಲ್ಲಿ ಕ್ರಿಕೆಟ್​​​​ಗೆ ಇದ್ದಷ್ಟು ಜನಪ್ರಿಯತೆ ಬೇರೆ ಯಾವ ಕ್ರೀಡೆಗೂ ಇಲ್ಲ. ಅದರಂತೆ ಭಾರತ ಫುಟ್​​​​ಬಾಲ್ ತಂಡಕ್ಕೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಅಂತಾನೆ ಹೇಳಲಾಗ್ತಿತ್ತು. ಆದ್ರೆ, ಇದೀಗ ಎಲ್ಲವೂ ಬದಲಾಗುತ್ತಿದೆ. ಭಾರತ ಫುಟ್​​​​ಬಾಲ್ ತಂಡದ ಕ್ಯಾಪ್ಟನ್ ಸುನೀಲ್ ಚೇಟ್ರಿ ಜನರನ್ನ ಫುಟ್​​​​​​ಬಾಲ್​​​​​​​​​​​​​​​ನತ್ತ ಸೆಳೆಯುತ್ತಿದ್ದಾರೆ.

ಭಾವನಾತ್ಮಕ ಮಾತಿಗೆ ಸ್ಪಂದಿಸಿದ ಫ್ಯಾನ್ಸ್
ಕ್ರೀಡಾಂಗಣಕ್ಕೆ ಬಂದು ಆಟ ನೋಡಿ. ಅಲ್ಲಿ ನೀವು ನಮಗೆ ಬೇಕಾದ್ರೆ ಬೈಯ್ರಿ ಏನು ಬೇಕಾದ್ರೂ ಅನ್ನಿ ಅಂತ ಇತ್ತೀಚೆಗೆ ಸುನೀಲ್​ ಚೆಟ್ರಿ ಜನರಲ್ಲಿ ವಿನಂತಿ ಮಾಡಿಕೊಂಡಿದ್ರು. ಅವರ ಭಾವನಾತ್ಮಕ ಮಾತಿಗೋ ಏನೋ ಇಂಟರ್​ಕಾಂಟಿನೆಲ್​ ಮ್ಯಾಚ್​​​ಗಳಿಗೆ ಪ್ರೇಕ್ಷಕರಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿತ್ತು. ​ ಚೆಟ್ರಿ ಮನವಿ ಮೇರೆಗೆ ಇಡೀ ಸ್ಟೇಡಿಯಂ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಇನ್ನು ಚೆಟ್ರಿ ಸಹ ಮ್ಯಾಚ್​ ನೋಡಲು ಬಂದ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಇಂಟರ್​​​​ಕಾಂಟಿನೆಂಟಲ್​ ಕಪ್​ ಗೆದ್ದು ತಂಡ ಚಾಂಪಿಯನ್​ ಎನಿಸಿಕೊಂಡರೆ, ಸುನೀಲ್​ ಚೇಟ್ರಿ ವಿಶ್ವದಾಖಲೆಯ ಸಾಧನೆ ಬರೆದ್ರು. ಈ ಮೂಲಕ ಜನರಲ್ಲಿ ಮತ್ತಷ್ಟು ಫುಟ್​​​​ಬಾಲ್​ ಜನಪ್ರಿಯತೆಯನ್ನ ಬೆಳೆಸುವಲ್ಲಿ ಯಶಸ್ವಿಯಾದ್ರು.

ಸ್ಟೇಡಿಯಂ ಭರ್ತಿ ಮಾಡಿದ ಫ್ಯಾನ್ಸ್​​​​​​​​​ಗೆ ಥ್ಯಾಂಕ್ಸ್
ಮನವಿ ಮೇರೆಗೆ ಸ್ಟೇಡಿಯಂಗೆ ಹೋಗಿ ಬೆಂಬಲಿಸಿದ್ದ ಅಭಿಮಾನಿಗಳಿಗೆ ಚೇಟ್ರಿ ವಿಶೇಷ ಟ್ವೀಟ್ ಮಾಡಿದ್ದಾರೆ.’ಅದ್ಭುತ ಅನುಭವ, ಭಾರತೀಯರಿಗೆ ಧನ್ಯವಾದಗಳು.ಈ ಗೆಲುವು ಸ್ಟೇಡಿಯಂನ್ನ ಭರ್ತಿ ಮಾಡಿದ ಆ ಅಭಿಮಾನಿಗಳಿಗೆ ಸೇರಿದ್ದು. ನಮ್ಮ ಮೇಲೆ ನಂಬಿಕೆ ಇಟ್ಟು ಚಿಯರ್ ಮಾಡಿದ ಎಲ್ಲರಿಗೂ ಈ ಗೆಲುವು ಸೇರಿದ್ದು. ನಮ್ಮ ಸಹ ಆಟಗಾರರು ಹಾಗೂ ಸ್ಟಾಫ್ ಒಟ್ಟಿಗೆ ಶ್ರಮಿಸಿ ಸಕ್ಸಸ್ ಕಂಡಿದ್ದಾರೆ. ಈಗ ಏನಿದ್ರು ಎಂಜಾಯ್​ ಸಮಯ. ನಾವು ಮತ್ತೆ ಬರುತ್ತೇವೆ ಯಾಕಂದ್ರೆ ನಮ್ಮ ಗುರಿ ಇನ್ನು ದೂರ ಇದೆ’ ಅಂತ ಟ್ವೀಟ್ ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv