ಸುನೀಲ್​ ಚೆಟ್ರಿ ಡಬಲ್​ ಧಮಾಕಾ, ಭಾರತಕ್ಕೆ ಕಾಂಟಿನೆಂಟಲ್​ ಕಪ್​

ಭಾರತದ ಫುಟ್ಬಾಲ್​​ ತಂಡ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಾಯಕ ಸುನೀಲ್​ ಚೆಟ್ರಿ ಅವರ ಆಕರ್ಷಕ ಗೋಲುಗಳ ನೆರವಿನಿಂದ ಮುಂಬೈನಲ್ಲಿ ನಡೆದ ಇಂಟರ್​ಕಾಂಟಿನೆಂಟಲ್​​ ಕಪ್​​ನಲ್ಲಿ ಭಾರತ ಕೀನ್ಯಾ ತಂಡವನ್ನ 2-0 ಅಂತರದಿಂದ ಮಣಿಸಿದೆ.

 

ಎರಡು ಗೋಲು ಬಾರಿಸಿದ ಚೆಟ್ರಿ

8ನೇ ಹಾಗೂ 29ನೇ ನಿಮಿಷಗಳಲ್ಲಿ ಗೋಲು ಬಾರಿಸಿದ ಸುನೀಲ್​ ಚೆಟ್ರಿ ಭಾರತದ ಗೆಲುವನ್ನ ಖಾತ್ರಿಪಡಿಸಿದರು. ಈ ಮೂಲಕ ಸದ್ಯದ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲು ಗಳಿಸಿದವರ ಲಿಸ್ಟ್​​​ನಲ್ಲಿ 2ನೇ ಸ್ಥಾನದಲ್ಲಿ ಅರ್ಜೆಂಟೀನಾದ ಲಿಯೋನೆಲ್​ ಮೆಸ್ಸಿ ಅವರನ್ನ ಸರಿಗಟ್ಟಿದರು. ಚೆಟ್ರಿ ಹಾಗೂ ಮೆಸ್ಸಿ ಇಬ್ಬರೂ 64 ಗೋಲು ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

ತುಂಬಿ ತುಳುಕಿದ ಸ್ಟೇಡಿಯಂ

ಇನ್ನೂ, ಭಾರತದ ಫುಟ್ಬಾಲ್​ ಪಂದ್ಯಗಳಿದ್ದಾಗ ಸ್ಟೇಡಿಯಂಗೆ ಬಂದು ನೋಡುವಂತೆ ಇತ್ತೀಚೆಗಷ್ಟೇ ನಾಯಕ ಸುನೀಲ್​ ಚೆಟ್ರಿ ಮಾಡಿದ ಮನವಿಗೆ ಮತ್ತೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಪ್ರೇಕ್ಷಕರಿಂದ ಜ್ಯಾಮ್​ ಆಗಿದ್ದ ಸ್ಟೇಡಿಯಂನಲ್ಲಿ, ಭಾರತ ಫುಟ್ಬಾಲ್​ ತಂಡ ಭರಪೂರ ಮನರಂಜನೆ ನೀಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv