ಚ್ಯೂಯಿಂಗ್ ಗಮ್ ತಿಂದೂ ತೆಳ್ಳಗಾಗಬಹುದು!

ತೆಳ್ಳಗಾಗಿ ಚೆಂದ ಕಾಣಬೇಕು ಅಂತಾ ಅದೆಷ್ಟೋ ಮಂದಿ ಏನೆಲ್ಲಾ ಸರ್ಕಸ್ ಮಾಡ್ತಾರೆ. ಆದ್ರೆ ನಿಮಗೆ ಗೊತ್ತಾ? ಚ್ಯೂಯಿಂಗ್ ಗಮ್ ತಿನ್ನೋದ್ರಿಂದಲೂ ತೂಕ ಕರಗಿಸಬಹುದಂತೆ. ಹೀಗಂತ ಇತ್ತೀಚೆಗೆ ಯುನಿವರ್ಸಿಟಿ ಆಫ್ ರೋಡ್ ಐಲ್ಯಾಂಡ್ ನಡೆಸಿರೋ ಸಂಶೋಧನೆಯಿಂದ ತಿಳಿದುಬಂದಿದೆ. ಈ ಸಂಶೋಧನೆ ಪ್ರಕಾರ ಯಾರಿಗೆ ಚ್ಯೂಯಿಂಗ್ ಗಮ್ ತಿನ್ನೋ ಅಭ್ಯಾಸವಿರುತ್ತದೋ ಅಂಥವರು ಚ್ಯೂಯಿಂಗ್ ಗಮ್ ತಿನ್ನದವರಿಗೆ ಹೋಲಿಸಿದ್ರೆ ಪ್ರತಿದಿನ ಅವರ ದೇಹ ಶೇ.68ರಷ್ಟು ಕಡಿಮೆ ಕ್ಯಾಲೊರಿ ಪಡೆದಿರುತ್ತಂತೆ. ಇದಕ್ಕೆ ಕಾರಣ ಚ್ಯೂಯಿಂಗ್‌ ಗಮ್, ಸಿಹಿ ತಿನ್ನಬೇಕು ಅನ್ನೋ ನಾಲಿಗೆ ಚಪಲ ಕಡಿಮೆ ಮಾಡೋ ಗುಣ ಹೊಂದಿರೋದು. ಹೀಗಾಗಿ ಅಂಥವರು ಬೇರೆಯವರಿಗಿಂತ ಶೇ.5ರಷ್ಟು ಹೆಚ್ಚು ಕ್ಯಾಲೊರಿ ದಹಿಸಿರುತ್ತಾರೆ ಅನ್ನುತ್ತಿದೆ ಸಂಶೋಧನೆ .

1. ಚ್ಯೂಯಿಂಗ್ ಗಮ್ ಅಗಿಯೋದ್ರಿಂದ ಹಸಿವು ಕಡಿಮೆಯಾಗಿ ಕುರುಕಲು ತಿಂಡಿಗಳು ತಿನ್ನಬೇಕು ಅನ್ನಿಸೋಲ್ಲ. ಹೀಗಾಗಿ ಕುರುಕಲು ತಿಂಡಿಗಳಿಂದ ಬರೋ ಬೊಜ್ಜು ನಿಯಂತ್ರಣವಾಗುತ್ತೆ.

2.ಚ್ಯೂಯಿಂಗ್ ಗಮ್ ಅಗಿಯುತ್ತಿದ್ದರೆ ಮುಖದ ಸ್ನಾಯುಗಳು ಗಟ್ಟಿಗೊಳ್ಳೋದ್ರ ಜೊತೆಗೆ ರಕ್ತಸಂಚಾರವಾಗುತ್ತೆ. ನಿಮ್ಮ ಮುಖದ ಜಾ ಲೈನ್‌ನಲ್ಲಿರೋ ಕೊಬ್ಬು ಕರಗಿ ಮುಖಾರವಿಂದ ಸಪೂರವಾಗುತ್ತೆ. ತುಂಬು ಮುಖದವರಿಗೆ ಇದು ಉತ್ತಮ ಫಲ ನೀಡುತ್ತದೆ.

3. ಚ್ಯೂಯಿಂಗ್ ಗಮ್ ಅಗೆಯುತ್ತಾ ಇದ್ದರೆ ಬಾಯಲ್ಲಿ ಅಧಿಕ ಸಲೈವಾ ಬಿಡುಗಡೆಯಾಗುತ್ತದೆ. ಸಲೈವಾದಲ್ಲಿ ಜೀರ್ಣಕ್ರಿಯೆಯ ಆಸಿಡ್ ಇರುವುದರಿಂದ ಇದು ಹೊಟ್ಟೆ ಸೇರಿದಾಗ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ.

4. ಶುಗರ್‌ಫ್ರೀ ಚ್ಯೂಯಿಂಗ್ ಗಮ್‌ ಆಯ್ದುಕೊಳ್ಳಿ.

5. ದಿನಕ್ಕೆ 4 ಚ್ಯೂಯಿಂಗ್ ಗಮ್‌ಗಿಂತ ಹೆಚ್ಚು ತಿನ್ನೋದು ಬೇಡ.

6. ಕ್ಯಾಲೊರಿ ದಹಿಸೋ ವಿಚಾರಕ್ಕೆ ಬಂದ್ರೆ ಚ್ಯೂಯಿಂಗ್‌ ಗಮ್‌ನಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಕ್ಯಾಲರಿ ಬರ್ನ್ ಆಗಲ್ಲ. ಹೀಗಾಗಿ ಕೇವಲ ಇದರಿಂದ ಮಾತ್ರ ತೆಳ್ಳಗಾಗೋದು ದೂರದ ಮಾತು. ದೈಹಿಕ ಚಟುವಟಿಕೆ ಜೊತೆ ಇದೂ ಸಹಾಯವಾಗುತ್ತೆ.

7. ಬಾಯಲ್ಲೊಂದು ಚ್ಯೂಯಿಂಗ್ ಗಮ್ ಹಾಕ್ಕೊಂಡು ಹಾಗೇ ಮೆಲ್ಲುತ್ತಿದ್ರೆ ಚ್ಯೂಯಿಂಗ್ ಗಮ್ ಹಾಕ್ಕೊಂಡು ಎಷ್ಟೊತ್ತು ಆಯ್ತು ಅನ್ನೋದೇ ಮರೆತು ಹೋಗಿರುತ್ತೆ. ಅತಿ ಹೆಚ್ಚು ಅವಧಿ ಒಂದೇ ಚ್ಯೂಯಿಂಗ್‌ ಗಮ್‌ನ ಬಾಯಲ್ಲಿಟ್ಟು ಅಗಿಯೋದು ಕೂಡ ಒಳ್ಳೇದಲ್ಲ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv