‘ಎಲೆಮರೆಯ’ ಮಳೆಗಾಲದ ಅಬ್ಯಾಲ ಫಾಲ್ಸ್!

ಕೊಡಗು : ಮಳೆಗಾಲದಲ್ಲಿ ಜಿಲ್ಲೆಯಲ್ಲಿನ ಜಲಪಾತಗಳನ್ನು ನೋಡೊದೇ ಕಣ್ಮನಗಳಿಗೆ ಹಬ್ಬ ಇದ್ದ ಹಾಗೆ. ಮಡಿಕೇರಿಯ ಅಬ್ಬಿಫಾಲ್ಸ್, ಚೇಲಾವರ ಫಾಲ್ಸ್, ದಕ್ಷಿಣ ಕೊಡಗಿನ ಇರ್ಪು ಫಾಲ್ಸ್, ಸೋಮವಾರಪೇಟೆಯಲ್ಲಿರುವ ಮಲ್ಲಳ್ಳಿ ಫಾಲ್ಸ್ ಹೀಗೆ ಮುಂಚೂಣಿ ಫಾಲ್ಸ್ ಗಳು ಕಣ್ಣಮುಂದೆ ಬರುತ್ತವೆ.
ಆದ್ರೆ ಅವುಗಳಲ್ಲದೆಯೂ ಎಲೆಮರೆಯಲ್ಲಿರುವ ಫಾಲ್ಸ್ ಗಳು ಜಿಲ್ಲೆಯಲ್ಲಿವೆ. ಅವುಗಳ ಸಾಲಿನಲ್ಲಿ ಚೆಟ್ಟಳ್ಳಿ ಬಳಿಯಿರುವ ಅಬ್ಯಾಲ ಫಾಲ್ಸ್ ಕೂಡಾ ಒಂದು. ಮಡಿಕೇರಿಯಿಂದ ಸಿದ್ದಾಪುರ ಕಡೆ ಸಾಗುವ ಮಾರ್ಗದಲ್ಲಿನ ಅಬ್ಯಾಲ ಗ್ರಾಮದಲ್ಲಿ ಈ ಫಾಲ್ಸ್ ಇರೋದ್ರಿಂದ ಅಬ್ಯಾಲ ಫಾಲ್ಸ್ ಅಂತ ಕರೆಯಲಾಗುತ್ತದೆ.
ಮಳೆಗಾಲದಲ್ಲಿ ಮಾತ್ರ ಇಲ್ಲಿ ನೀರು ಧುಮ್ಮಿಕ್ಕುತ್ತದೆ. ನೂರು ಅಡಿಗೂ ಎತ್ತರದಿಂದ ಧುಮ್ಮಿಕ್ಕುವ ನೀರಿನ ವೈಭವವನ್ನು ಈ ಮಾರ್ಗವಾಗಿ ಹೋಗುವ ಜನ ನೋಡಿ ಎಂಜಾಯ್ ಮಾಡುತ್ತಾರೆ. ಇನ್ನು ಈ ಫಾಲ್ಸ್ ಅಪಾಯಕಾರಿ ಅಲ್ಲವಾದ್ದರಿಂದ, ಫಾಲ್ಸ್ ಎದುರೆ ಪ್ರವಾಸಿಗರು ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಾರೆ. ಈ ಫಾಲ್ಸ್ ಮಡಿಕೇರಿಯಿಂದ 15 ಕಿಲೋಮೀಟರ್ ದೂರದಲ್ಲಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv