ಜಸ್ಟ್​​ 1 ಅಕ್ಷರದ ಕೊರತೆ: ‘ವಿಶ್ವದ ಅತೀ ಉದ್ದದ ರೇಲ್ವೆ ನಿಲ್ದಾಣ ಹೆಸರು’ ಪಟ್ಟ​ ಚೆನ್ನೈ ಸ್ಟೇಷನ್​​ಗೆ ಮಿಸ್

ಚೆನ್ನೈ: ರೇಲ್ವೆ ನಿಲ್ದಾಣಗಳ ಹೆಸರುಗಳಲ್ಲಿ ವಿಶ್ವದಲ್ಲೇ ಅತೀ ಉದ್ದದ ಹೆಸರು ಎಂಬ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ಚೆನ್ನೈ ಸೆಂಟ್ರಲ್ ರೇಲ್ವೆ ನಿಲ್ದಾಣ ಜಸ್ಟ್​​ ಮಿಸ್​ ಆಗಿದೆ. ಈ ನಿಲ್ದಾಣಕ್ಕೆ ಪುರುಚ್ಚಿ ತಲೈವಾರ್​​ ಡಾ. ಎಂ.ಜಿ. ರಾಮಚಂದ್ರನ್​​ ಸೆಂಟ್ರಲ್​ ರೇಲ್ವೆ ಸ್ಟೇಷನ್​​ ಎಂದು ಹೆಸರಿಡಲಾಗಿದೆ. ಆದ್ರೆ ಒಂದೇ ಒಂದು.. ಹೌದು ಜಸ್ಟ್​ ಒಂದೇ ಒಂದು ಅಕ್ಷರದಿಂದ ಅತೀ ಉದ್ದದ ರೇಲ್ವೆ ನಿಲ್ದಾಣ ಹೆಸರು ಪಟ್ಟವನ್ನು ತನ್ನದಾಗಿಸಿಕೊಳ್ಳುವಲ್ಲಿ ಚೆನ್ನೈ ಸೆಂಟ್ರಲ್ ರೇಲ್ವೆ ನಿಲ್ದಾಣ ವಿಫಲವಾಗಿದೆ.

(Puratchi Thalaivar Dr. M.G. Ramachandran Central Railway Station) ಹೆಸರಲ್ಲಿರೋ ಅಕ್ಷರಗಳು ಹಾಗೂ ಚುಕ್ಕಿ ಎಲ್ಲಾ ಸೇರಿ 57 ಅಕ್ಷರಗಳು ಬರುತ್ತವೆ. ಹಾಗಾದ್ರೆ ಇದಕ್ಕಿಂತ ಉದ್ದದ ಹೆಸರು ಯಾವ ನಿಲ್ದಾಣಕ್ಕಿದೆ ಅಂತ ಯೋಚಿಸ್ತಿದ್ದೀರಾ? ವೇಲ್ಸ್​​ನಲ್ಲಿರೋ ಒಂದು ರೇಲ್ವೆ ನಿಲ್ದಾಣ ಸದ್ಯ ವಿಶ್ವದಲ್ಲೇ ಅತೀ ಉದ್ದದ ಹೆಸರು ಹೊಂದಿದೆ. 58 ಅಕ್ಷರಗಳಿರುವ ಆ ನಿಲ್ದಾಣದ ಹೆಸರನ್ನು ಉಚ್ಛಾರಣೆ ಮಾಡೋಕು ಕೂಡ ಕಷ್ಟ. ಆ ನಿಲ್ದಾಣದ ಹೆಸರು: “Llanfairpwllgwyngyllgogerychwyrndrobwllllantysiliogogogoch”

ಕಳೆದ ಏಪ್ರಿಲ್ 5ರಂದು ಚೆನ್ನೈ ಸೆಂಟ್ರಲ್ ರೇಲ್ವೆ ನಿಲ್ದಾಣಕ್ಕೆ ನಟ, ರಾಜಕಾರಣಿ ಎಂ.ಜಿ ರಾಮಚಂದ್ರನ್ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಇದು ಸದ್ಯ ಭಾರತದಲ್ಲಿರೋ ಅತೀ ಉದ್ದವಾದ ರೇಲ್ವೆ ನಿಲ್ದಾಣದ ಹೆಸರು. ಇನ್ನುಳಿದ ಅತೀ ಉದ್ದದ ಹೆಸರುಗಳೆಂದರೆ ಕರ್ನಾಟಕದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಗರ ರೇಲ್ವೆ ನಿಲ್ದಾಣ, ಆಂಧ್ರಪ್ರದೇಶದ ವೆಂಕಟ ನರಸಿಂಹರಾಜುವಾರಿಪೇಟ ಹಾಗೂ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್​ ರೇಲ್ವೆ ನಿಲ್ದಾಣ. ಬೆಂಗಳೂರು ರೇಲ್ವೆ ನಿಲ್ದಾಣಕ್ಕೆ 2015ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರನ್ನು ಇಡಲಾಯಿತು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv