ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ಸಂಕಲ್ಪ: ಲಾರಿ ಎಳೆದು ಮಹಿಳಾ ಅಭಿಮಾನಿ ಸಾಹಸ..!

ದಾವಣಗೆರೆ: ಪ್ರಧಾನಿ ನರೇಂದ್ರ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸುವ ಅಭಿಮಾನಿಗಳು ಸಾಕಷ್ಟಿಸಿದ್ದಾರೆ. ಈ ಮಧ್ಯೆ ಇಲ್ಲೊಬ್ಬರು ಮೋದಿ ಮಹಿಳಾ ಅಭಿಮಾನಿ ವಿಭಿನ್ನವಾಗಿ ಯಾತ್ರೆ ಕೈಗೊಂಡಿದ್ದಾರೆ. ಚೆನ್ನೈ ಮೂಲದ ರಾಜಲಕ್ಷ್ಮಿ, ಮೋದಿ ಅವ್ರ ಪಕ್ಕಾ ಅಭಿಮಾನಿ. ಮೋದಿ ಮತ್ತೆ  ಪ್ರಧಾನಿಯಾಗಲಿ ಎಂಬ ಸಂಕಲ್ಪ ಅವರದ್ದು, ಹೀಗಾಗಿ ಪ್ರತಿ ಜಿಲ್ಲೆಯಲ್ಲಿ ಲಾರಿ ಎಳೆಯುವ ಮೂಲಕ ಅವರ ಗೆಲುವಿಗಾಗಿ ಯಾತ್ರೆ ಆರಂಭಿಸಿದ್ದಾರೆ. ದೇಶಾದ್ಯಂತ ಯಾತ್ರೆ ನಡೆಸುತ್ತಿದ್ದಾರೆ. ಇಂದು ದಾವಣಗೆರೆಗೆ ರಾಜಲಕ್ಷ್ಮಿ ಮಾಂಡ ಆಗಮಿಸಿದ್ದರು. ನಗರದ ಬಂಬೂ ಬಜಾರ್ ರಸ್ತೆಯಲ್ಲಿ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪದ ಎದುರು ಲಾರಿ ಎಳೆಯುವುದರ ಮೂಲಕ ರಾಜಲಕ್ಷ್ಮಿ ಅಚ್ಚರಿ ಮೂಡಿಸಿದ್ರು. ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕ ಸಮ್ಮುಖದಲ್ಲಿ ಲಾರಿ ಎಳಿದು ಸಾಹಸ ಮೆರೆದರು. ಅಲ್ಲಿ ನೆರದಿದ್ದ ಜನರು ಅಭಿಮಾನಿಯ ಸಾಹಸ ಕಂಡು ದಂಗಾದರು.

ರಾಜಲಕ್ಷ್ಮಿ ಮಾಂಡ ತಮಿಳುನಾಡಿನಲ್ಲಿ ಬಾಹುಬಲಿ 3 ಎಂದೇ ಪ್ರಸಿದ್ದಿ ಪಡೆದಿದ್ದಾರೆ. 25 ಜನ ತಂಡದೊಂದಿಗೆ ಇವರು ಬೈಕ್ ಮೂಲಕ ಪ್ರವಾಸ ಮಾಡುತ್ತಿದ್ದಾರೆ.8 ರಾಜ್ಯಗಳಲ್ಲಿ, 155 ಜಿಲ್ಲೆಗಳಲ್ಲಿ, 15000 ಕಿಮೀ, 55 ದಿನಗಳ ಕಾಲ ಯಾತ್ರೆ ಕೈಗೊಂಡಿದ್ದಾರೆ. ಇಂದು ದಾವಣಗೆರೆಗೆ ಅವ್ರ ತಂಡ ಆಗಮಿಸಿದೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv