ಕಣ್ಣಿಗೆ ಕೆಮಿಕಲ್​ ಸ್ಪ್ರೇ ಮಾಡಿ ₹20 ಲಕ್ಷ, ಎಸ್​​ಯುವಿ ಕಾರ್​​ ದರೋಡೆ

ತುಮಕೂರು: ಕಣ್ಣಿಗೆ ಕೆಮಿಕಲ್​​ ಸ್ಪ್ರೇ ಮಾಡಿ ₹20 ಲಕ್ಷ ನಗದು, ಒಂದು ಎಸ್​​​​ಯುವಿ ಕಾರು ದೋಚಿದ ಘಟನೆ ಕುಣಿಗಲ್​ ತಾಲೂಕಿನ ಬಿದನಗೆರೆಯ ಶನಿ ಮಹಾತ್ಮ ದೇವಸ್ಥಾನದ ಬಳಿ ನಿನ್ನೆ ತಡರಾತ್ರಿ ನಡೆದಿದೆ.

ಶನಿಮಾಹಾತ್ಮ ದೇವಾಲಯದ ಧರ್ಮದರ್ಶಿ ಧನಂಜಯ ಸ್ವಾಮೀಜಿ ಮೇಲೆ 6 ಜನ ದರೋಡೆಕೋರರ ತಂಡ ಕೆಮಿಕಲ್​​​​​ ಸ್ಪ್ರೇ ಮಾಡಿ ಕಳ್ಳತನ ಎಸಗಿದ್ದಾರೆ. ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ದರೋಡೆಕೋರರು ಬಂದಿದ್ದರು. ಈ ವೇಳೆ ದೇವಾಲಯದಿಂದ ಪೂಜೆ ಮುಗಿಸಿ ಧನಂಜಯ ಸ್ವಾಮೀಜಿ ಮನೆಗೆ ಕಾರಿನಲ್ಲಿ ಹೋಗುವ ವೇಳೆ ಅವರನ್ನು ತಡೆದು ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಹಲ್ಲೆಗೊಳಗಾದ ಧನಂಜಯ ಸ್ವಾಮೀಜಿಯನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕುಣಿಗಲ್​​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv