ರಾಮನಗರ: ವಂಡರ್ ಲಾ ಅಂದ್ರೆನೇ ವಂಡರ್. ಅಲ್ಲಿರೋ ಥ್ರಿಲ್ಲಿಂಗ್ ಗೇಮ್ ಸೂಪರೋ ಸೂಪರ್. ಆದ್ರೆ ಅದೇ ವಂಡರ್ಲಾನಲ್ಲಿದ್ದ ಮಂದಿ ಇವತ್ತು ವಂಡರ್ಗೆ ಒಳಗಾಗಿದ್ರು. ಚಿರತೆಯೊಂದು ವಂಡರ್ಲಾಗೆ ನುಗ್ಗಿ ಎಲ್ಲರನ್ನ ಬೆಚ್ಚಿಬೀಳಿಸಿತ್ತು. ಇದೀಗ ಯಶಸ್ವಿ ಕಾರ್ಯಾಚರಣೆ ನಡೆಸಿ ಚಿರತೆಯನ್ನ ಸೆರೆಹಿಡಿಯಲಾಗಿದೆ. ರಾಮನಗರ ತಾಲೂಕಿನ ಮಂಚನಾಯಕನಹಳ್ಳಿ ಗ್ರಾಮದ ಬಳಿಯಿರುವ ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ಗೆ ಚಿರತೆ ನುಗ್ಗಿ, ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿತ್ತು. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ವಂಡರ್ ಲಾಗೆ ಬರ್ತಿರ್ತಾರೆ. ಆದ್ರೆ ಈ ಚಿರತೆ ಸಡನ್ ಎಂಟ್ರಿ ಎಲ್ಲರಿಗೂ ಶಾಕ್ ಕೊಟ್ಟಿತ್ತು. ನೀಲಗಿರಿ ತೋಪಿಗೆ ಬೆಂಕಿ ಬಿದ್ದಿದ್ರಿಂದ ಚಿರತೆ ವಂಡರ್ಲಾಗೆ ನುಗ್ಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಬಿಡದಿ ಪೋಲೀಸರು ದೌಡಾಯಿಸಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ರು. ಗೆಸ್ಟ್ಹೌಸ್ ಒಳಗೆ ನುಗ್ಗಿದ್ದ ಚಿರತೆಯನ್ನ ಸದ್ಯ ಬನ್ನೇರುಘಟ್ಟ ವೈದ್ಯರ ನೆರವಿನಿಂದ ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನ ಸೆರೆಹಿಡಿಯಲಾಗಿದೆ.
ವಂಡರ್ ಲಾದಲ್ಲಿ ‘ವಂಡರ್’ ಮೂಡಿಸಿದ ಚಿರತೆ ಸೆರೆ..!

28 Feb 2018