ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಏನಾಯ್ತು?

ಮಾಗಡಿ: ತಾಲೂಕಿನ ಅಣೆಕಾರನಹಳ್ಳಿ ಗ್ರಾಮದಲ್ಲಿ  ಜನರ ನಿದ್ದೆಗೆಡಿಸಿದ್ದ  ಚಿರತೆ, ಕೊನೆಗೂ ಸಿಕ್ಕಿಬಿದ್ದಿದೆ. ಸಾಕಷ್ಟು ದಿನಗಳಿಂದ ಗ್ರಾಮದಲ್ಲಿ ಓಡಾಡುತ್ತಿದ್ದ ಚಿರತೆ ಕಂಡು ಜನ ಭಯಬೀತರಾಗಿದ್ದರು. ಚಿರತೆ ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ರು. ಅದರಂತೆ ಅರಣ್ಯ ಸಿಬ್ಬಂದಿ ಬೋನಿಟ್ಟು ಚಿರತೆ ಸೆರೆ ಕಾರ್ಯಾಚರಣೆ ಆರಂಭಿಸಿದ್ರು.  ಕೊನೆಗೂ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಧಿಕಾರಿಗಳು ಯಶಸ್ವಿಯಾಗಿದ್ದಾರೆ. 4 ವರ್ಷದ ಗಂಡು ಚಿರೆತೆ ಬೋನಿಗೆ ಬಿದ್ದಿದೆ. ಚಿರತೆ ಸೆರೆ ಸಿಕ್ಕಿದ್ರಿಂದ  ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *