ಆಹಾರ ಅರಸಿ ಬಂದು ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ.!

ಹಾಸನ: ಆಹಾರ ಅರಸಿ ಬಂದ ಚಿರತೆಯೊಂದು ದನದ ಕೊಟ್ಟಿಗೆಗೆ ನುಗ್ಗಿದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ವೇಲಾಪುರಿ ಗೌಡ ಎಂಬುವವರ ದನದ ಕೊಟ್ಟಿಗೆಗೆ ಚಿರತೆ ನುಗ್ಗಿತ್ತು. ಕೊಟ್ಟಿಗೆಯ ಅಟ್ಟಣಿಗೆ ಮೇಲೆ ಕುಳಿತಿರುವ  ಚಿರತೆಯನ್ನು ಕಂಡು ಮನೆಯ ಮಾಲೀಕ ಬಾಗಿಲನ್ನು ಹಾಕಿ ಕೂಡಿಹಾಕಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಡಿಆರ್​ಎಫ್​ ಮತ್ತು ಅರಣ್ಯ ಸಿಬ್ಬಂದಿ ಮನೆಯನ್ನ ಸುತ್ತುವರೆದು ಚಿರತೆ ಸೆರೆಗೆ ಬಲೆ ಬೀಸಿದರು. ಆದ್ರೆ ಬಲೆಗೆ ಬೀಳದೇ ಅರಣ್ಯಾಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಚಿರತೆ ಮುಂದಾಯ್ತು. ಮನೆಯೊಳಗೆ ಅಡ್ಡಾಡುತ್ತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿದೆ. ಕೊನೆಗೆ ಖಾರದ ಪುಡಿ ಹೊಗೆ ಹಾಕಿದ್ರೂ ಚಿರತೆ ಮಾತ್ರ ಡೋಂಟ್​ಕೇರ್​  ಮಾಡದೇ ಓಡಾಡಿಕೊಂಡಿದೆ. ಚಿರತೆ ಸೆರೆಗಾಗಿ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದರೂ ಚಿರತೆ ಇನ್ನೂ ಬಲೆಗೆ ಬಿದ್ದಿಲ್ಲ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv