ಆನೆ ಕಿರಿಕಿರಿ ಜೊತೆ ಈಗ ಚಿರತೆ ಕಾಟ, ನಾಲ್ವರ ಮೇಲೆ ಎರಗಿದ ನರಭಕ್ಷಕ..!

ಆನೇಕಲ್​: ಆನೆಗಳ ನಿರಂತರ ಹಾವಳಿ ಹಾಗೂ ದಾಳಿಗೆ ಕಂಗೆಟ್ಟಿದ್ದ ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗ ಚಿರತೆ ಕಾಣಿಸಿಕೊಂಡಿದ್ದೂ ಅಲ್ಲದೇ ಗ್ರಾಮಸ್ಥರ ಮೇಲೆ ಮನಬಂದಂತೆ ಎರಗಿದೆ. ವಾನಂಬಾಡಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಕೂಡಲೇ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇನ್ನು, ಚಿರತೆಯನ್ನ ಸೆರೆ ಹಿಡಿಯಲು ತಮಿಳುನಾಡು ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದಾರೆ. ಆದರೆ ಇದುವರೆಗೂ ಚಿರತೆ ಬೋನಿಗೆ ಬೀಳದೇ ಅರಣ್ಯಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಇನ್ನು ಚಿರತೆಯನ್ನ ಸೆರೆ ಹಿಡಿಯಲು ಗ್ರಾಮಸ್ಥರೊಂದಿಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಈ ವೇಳೆ ಚಿರತೆ ಕಾರ್ಯಾಚರಣೆಗೆ ಬಂದವರನ್ನ ಓಡಿಸಿಕೊಂಡು ಹೋಗಿದೆ. ಅದರ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.