ಮನೆಯೊಳಗೆ ನುಗ್ಗಿದ ಚಿರತೆಯ ರಕ್ಷಣೆ

ರಾಮನಗರ: ಇತ್ತೀಚೆಗಷ್ಟೇ ತುಮಕೂರು ಬಳಿಯ ಮನೆಯೊಳಗೆ ಚಿರತೆ ನುಗ್ಗಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಘಟನೆ ರಾಮನಗರ ಬಳಿ ನಡೆದಿದೆ. ತಾಲೂಕಿನ ಸಂಗನಬಸವನದೊಡ್ಡಿ ಗ್ರಾಮದಲ್ಲಿ ಬೆಳಗಿನ ಜಾವ 3 ಗಂಟೆ ವೇಳೆಗೆ ನಾಯಿಯನ್ನ ಹಿಡಿಯಲು ರವಿ ಎಂಬುವವರ ಮನೆಗೆ ಚಿರತೆ ನುಗ್ಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗೆ ಅರವಳಿಕೆ ಮದ್ದು ನೀಡಿ ಚಿರತೆಯನ್ನ ಹಿಡಿದಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *