9 ಕುರಿ ಸಾಯಿಸಿದ ಹಂತಕ, ತಿನ್ನಲಿಲ್ಲ-ಉಳಿಸಲೂ ಇಲ್ಲ..!

ರಾಮನಗರ: ತಾಲೂಕಿನ ಪೇಟೆ ಕುರುಬರ ಹಳ್ಳಿಯಲ್ಲಿ ನಿನ್ನೆ ರಾತ್ರಿ ಚಿರತೆಯೊಂದು ದಾಳಿ ನಡೆಸಿದ್ದು, ಗ್ರಾಮದ ಜಯಮ್ಮ ಅವರ ಮನೆಯ ಕೊಟ್ಟಿಗೆಗೆ ನುಗ್ಗಿದ ಚಿರತೆ 9 ಕುರಿಗಳನ್ನು ಸಾಯಿಸಿದೆ.

ಸಂಜೆ ಎಂದಿನಂತೆ ಕುರಿಗಳನ್ನು ದೊಡ್ಡಿಯಲ್ಲಿ ಕಟ್ಟಿಹಾಕಲಾಗಿತ್ತು. ಮಧ್ಯರಾತ್ರಿ ಕೊಟ್ಟಿಗೆಗೆ ಎಂಟ್ರಿ ನೀಡಿದ ಚಿರತೆ ಕುರಿಗಳ ಮೇಲೆ ತನ್ನ ಪ್ರತಾಪವನ್ನು ತೋರಿಸಿದೆ. ಸುಮಾರು ಮೂರು ಲಕ್ಷ ಮೌಲ್ಯ ಬೆಲೆ ಬಾಳುವ 9 ಕುರಿಗಳನ್ನು ಸಾಯಿಸಿ ಓಡಿಹೋಗಿದೆ. ಹೀಗಾಗಿ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಜಯಮ್ಮ ಕುಟುಂಬ ಆಗ್ರಹಿಸಿದೆ.

ಇನ್ನು ಚಿರತೆ ದಾಳಿ ಮಾಡ್ತಿರೋದು ಇದೇ ಮೊದಲಲ್ಲ. ಕಳೆದ ಒಂದು ತಿಂಗಳಿಂದ ಚಿರತೆಗಳು ಗ್ರಾಮಕ್ಕೆ ಎಂಟ್ರಿ ನೀಡಿ ದಾಳಿ ಮಾಡುತ್ತಿವೆ. ಎರಡು ದಿನಗಳ ಹಿಂದಷ್ಟೇ ಸಂಗನಬಸವನದೊಡ್ಡಿ ಗ್ರಾಮದಲ್ಲಿ ನಾಯಿಯನ್ನ ಹಿಡಿಯಲು ಮನೆಗೆ ನುಗ್ಗಿದ ಚಿರತೆಯನ್ನ ಹಿಡಿದು ಲಾಕ್​ ಮಾಡಲಾಗಿತ್ತು. ಇದೀಗ ಇನ್ನೊಂದು ಚಿರತೆ ಪೇಟೆ ಕುರುಬರ ಹಳ್ಳಿಯಲ್ಲಿ ದಾಳಿ ನಡೆಸಿರೋದು ಜನರ ನಿದ್ದೆಗೆಡಿಸಿದೆ.

Leave a Reply

Your email address will not be published. Required fields are marked *