ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ವಾಹನ ತಪಾಸಣೆ

ತುಮಕೂರು:  ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ,  ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರ  ವಾಹನವನ್ನ ಚುನಾವಣಾ ಚೆಕ್‌ಪೋಸ್ಟ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಇಂದು ತುಮಕೂರಿಗೆ ತೆರಳಿ ಕಾರ್ಯಕರ್ತರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ ಅವರು ವಾಪಾಸ್​ ಬೆಂಗಳೂರಿಗೆ ಬರುವ ವೇಳೆ  ಕುಣಿಗಲ್ ಚೆಕ್​ಪೊಸ್ಟ್​ನಲ್ಲಿ ವಾಹನವನ್ನ ತಪಾಸಣೆ ನಡೆಸಿದ್ದಾರೆ. ಇನ್ನು ದೇವೇಗೌಡರು ತಪಾಸಣೆಗೆ ಸಹಕರಿಸಿದ್ದು, ತಪಾಸಣೆ ಮುಗಿದ ಬಳಿಕ ಬೆಂಗಳೂರಿನತ್ತ ತೆರಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv