ಮೈಸೂರು ಪಾಲಿಕೆಯ ಮಾಜಿ ಸದಸ್ಯನ ವಿರುದ್ಧ ₹12 ಲಕ್ಷ ವಂಚನೆ ಆರೋಪ

ಮೈಸೂರು: ಉದ್ಯೋಗ ಕೊಡಿಸುವುದಾಗಿ ಪಾಲಿಕೆಯ ಮಾಜಿ ಸದಸ್ಯ ಸೋಮ ಸುಂದರ್ ವಂಚಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಯಶಸ್ವಿನಿ, ಶೃತಿ, ಶ್ವೇತಾ ಸಹೋದರಿಯರು ವಂಚನೆಗೆ ಒಳಗಾದವರು. ಒಬ್ಬರಿಗೆ 4 ಲಕ್ಷ ರೂಪಾಯಿಗಳಂತೆ ಮೂರು ಮಂದಿಗೆ ಒಟ್ಟು 12 ಲಕ್ಷ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಸೋಮ ಸುಂದರ್, ಆರೋಪಿ

ಅಕ್ಷತ್ ಅನ್ನೋರ ಮೂಲಕ ಸೋಮ ಸುಂದರ್ ಇವರನ್ನ ಪರಿಚಯ ಮಾಡಿಕೊಂಡಿದ್ದ. ನಂತರ 2017ರ ಜೂನ್​ನಲ್ಲಿ ಖಾಸಗಿ ಹೋಟೆಲ್​​ಗೆ  ಕರೆಸಿಕೊಂಡು ಮಾತುಕತೆ ನಡೆಸಿ, ಹಣ ಕೊಟ್ಟರೆ ಉದ್ಯೋಗ ಕೊಡಿಸುವುದಾಗಿ ಭರವಸೆ ನಿಡಿದ್ದ. ಸರ್ಕಾರಿ ನೌಕರಿಯ ಆಸೆಗೆ ಚಿಕ್ಕಪ್ಪನ ಮಗ ಅಕ್ಷತ್ ಮೂಲಕ ಯಶಸ್ವಿನಿ 12 ಲಕ್ಷ ಹಣ ನೀಡಿದ್ದರು.

ಹಣ ನೀಡಿದ ಬಳಿಕ ಸೋಮಸುಂದರ್, ಶೇಖರ್ ಬಾಬು, ಸುರೇಶ್ ಪರಿಚಯ ಮಾಡಿಕೊಟ್ಟು ಇವರು ಮುಂದಿನ ವ್ಯವಹಾರವನ್ನ ನೋಡಿಕೊಳ್ತಾರೆ ಎಂದು ಹೇಳಿದ್ದ ಎನ್ನಲಾಗಿದೆ. ಈಗ ಶೇಖರ್ ಬಾಬು, ಸುರೇಶ್ ವಿಚಾರಿಸಿದ್ರೆ ನಮಗೇನೂ ಗೊತ್ತಿಲ್ಲ ಅಂತಾ ಸಬೂಬು ಹೇಳುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದರಿಂದ ಮೋಸ ಹೋದ ಸಹೋದರಿಯರು ಕೆ.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ‌ಗುರುತಿಸಿಕೊಂಡು ಗೆದ್ದು ಪಾಲಿಕೆ ಸದ್ಯನಾಗಿದ್ದ ಸೋಮಸುಂದರ್, ಸದ್ಯ ಜೇಡಿಎಸ್ ನಲ್ಲಿದ್ದು , ಜೆಡಿಎಸ್ ರಾಜ್ಯಾಧ್ಯಕ್ಷ ಎ ಹೆಚ್ ವಿಶ್ವನಾಥ್ ಬಣದಲ್ಲಿ ಗುರ್ತಿಸಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv