ತೂಕ ಇಳಿಸಲು ಬಯಸುವವರು ರೈಸ್​ ತಿನ್ಬೇಕಾ..? ಚಪಾತಿ ತಿನ್ಬೇಕಾ..?

ಡಯೆಟ್​ ಮಾಡುವವರಿಗೆ ಯಾವಾಗ್ಲೂ ಒಂದೇ ಕನ್​ಫ್ಯೂಷನ್​. ಚಪಾತಿ ತಿನ್ಬೇಕಾ ಅಥವಾ ಅನ್ನ ತಿನ್ಬೇಕಾ ಅನ್ನೋದು. ಚಪಾತಿ ಮತ್ತು ರೈಸ್ ಅನ್ನೋ ಆಪ್ಷನ್​ ಬಂದಾಗ ಎಲ್ಲಾರು ಹೆಚ್ಚಾಗಿ ಚಪಾತಿಯನ್ನ ಸೆಲೆಕ್ಟ್​ ಮಾಡಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಅನ್ನ ತಿನ್ನದೇ ಇರೋದು ತುಂಬಾನೆ ಕಷ್ಟ.  ರೈಸ್​ ತಿನ್ನೋದನ್ನ ಬಿಡೋಕೆ ಏನೇನೋ ಸರ್ಕಸ್​ ಮಾಡ್ತಾ ಇರ್ತಾರೆ. ತೂಕ ಕಳೆದುಕೊಳ್ಳಬೇಕು ಅಂತಾ ನೀವೇನಾದ್ರೂ ಡಿಸೈಡ್​ ಮಾಡಿದ್ರೆ ಕೆಲವೊಂದು ಆಹಾರಗಳನ್ನ ಖಂಡಿತವಾಗಿ ಅವಾಯ್ಡ್​​ ಮಾಡಬೇಕಾಗುತ್ತದೆ. ಅದರಲ್ಲೂ ಕಾರ್ಬೋಹೈಡ್ರೇಟ್ಸ್​​​ ಹೆಚ್ಚಾಗಿರೋ ಆಹಾರಗಳ ಸೇವನೆ ಕಡಿಮೆ ಮಾಡಬೇಕಾಗುತ್ತದೆ.

ಚಪಾತಿ ಮತ್ತು ರೈಸ್ಎರಡೂ ಒಂದೇ ರೀತಿಯ ಕಾರ್ಬ್ಸ್ ಮತ್ತು ಕ್ಯಾಲೋರೀಸ್​ ಹೊಂದಿವೆ. ಆದರೆ ಅದರ ಪೌಷ್ಟಿಕಾಂಶದ ಮೌಲ್ಯದಲ್ಲಿ ಭಿನ್ನವಾಗಿರುತ್ತವೆ. ರೈಸ್​ಗೆ ಹೋಲಿಸಿದ್ರೆ ಚಪಾತಿಯಲ್ಲಿ  ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ.  ಆದರೆ ನೀವು ರೈಸ್​ ಸೇವಿಸಿದ್ರೆ ಸುಲಭವಾಗಿ ಜೀರ್ಣವಾಗುತ್ತದೆ ಅಲ್ಲದೇ ಹಸಿವಾಗಲು  ಶುರುವಾಗುತ್ತದೆ. ಚಪಾತಿಯಲ್ಲಿ ಪೌಷ್ಟಿಕಾಂಶ ಪ್ರಮಾಣ ಹೆಚ್ಚು. ಸಮಸ್ಯೆಯೆಂದರೆ ಚಪಾತಿಯಲ್ಲಿ ಸೋಡಿಯಂ ಅಂಶ ಹೆಚ್ಚಿದೆ. ಪ್ರತಿ 120 ಗ್ರಾಂ ಗೋಧಿ 190 ಮಿಲಿ ಗ್ರಾಂ ಸೋಡಿಯಂ ಒಳಗೊಂಡಿರುತ್ತದೆ.

ಡಯೆಟ್​ ಎಂಬ ವಿಷಯಕ್ಕೆ ಬಂದ್ರೆ ರೈಸ್​ಗಿಂತ ಚಪಾತಿಯೇ ಉತ್ತಮ ಎನ್ನಲಾಗುತ್ತದೆ. ಯಾಕೆ ಅಂತೀರಾ ಇಲ್ಲಿದೆ ನೋಡಿ

1. ಚಪಾತಿಗೆ ಹೋಲಿಸಿದ್ರೆ ರೈಸ್​ನಲ್ಲಿ ಫೈಬರ್ ಅಂಶ ಕಡಿಮೆಯಿದೆ.  ಚಪಾತಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಾಗಿದೆ.

2. ಚಪಾತಿಯಲ್ಲಿರುವ ಫೈಬರ್​ ಅಂಶವು  ಹೊಟ್ಟೆ ಹಸಿಯುವುದನ್ನ ಕಡಿಮೆ ಮಾಡಿ, ಯಾವಾಗಲೂ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಆದ್ದರಿಂದ  ಬೇಗನೆ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

3. ಚಪಾತಿಗೆ ಹೋಲಿಸಿದ್ರೆ ರೈಸ್​ನಲ್ಲಿ ಕ್ಯಾಲೋರಿಸ್ ಹೆಚ್ಚಿರುತ್ತದೆ. ​

4. ಚಪಾತಿಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಮ್, ಕಬ್ಬಿಣ ಮತ್ತು ಫಾಸ್ಫರಸ್ ಅಂಶವು ಹೆಚ್ಚಿರುತ್ತದೆ. ಆದರೆ ರೈಸ್​ನಲ್ಲಿ ಈ ಎಲ್ಲಾ ಅಂಶಗಳು ಕಡಿಮೆ ಮಟ್ಟದಲ್ಲಿದೆ.

5. ರೈಸ್​ಗೆ ಹೋಲಿಸಿದ್ರೆ ಚಪಾತಿ ಬೇಗ ಜೀರ್ಣವಾಗುವುದಿಲ್ಲ. ಇದು ರಕ್ತದಲ್ಲಿ ಶುಗರ್​ ಪ್ರಮಾಣವನ್ನ ಕಡಿಮೆ ಮಾಡುತ್ತದೆ.

ಆದರೆ ಡಯೆಟ್​ಗೆ ಒಳ್ಳೆಯದು ಎಂಬ ಕಾರಣಕ್ಕೆ ಅತಿಯಾಗಿ ಚಪಾತಿ ಸೇವಿಸದಿರಿ. ಅತಿಯಾದರೆ ಅಮೃತವು ವಿಷ ಎಂಬುದನ್ನ ನೆನಪಿಟ್ಟುಕೊಳ್ಳಿ. ಆದಷ್ಟು ರಾತ್ರಿ 7.30ಕ್ಕೆ ನಿಮ್ಮ ಊಟವನ್ನ ಮುಗಿಸಿಕೊಂಡು  ಸ್ವಲ್ಪ ಹೊತ್ತು ವಾಕ್​ ಮಾಡಿ. ಬೇಗ ಮಲಗುವ ಮತ್ತು ಬೇಗ ಏಳುವ ಅಭ್ಯಾಸವನ್ನ ರೂಢಿಸಿಕೊಳ್ಳಿ. ಇನ್ನು ಅನ್ನ ತಿನ್ನಲೇಬೇಕು ಎಂದುಕೊಳ್ಳುವವರು ಬ್ರೌನ್​ ರೈಸ್​ ಸೇವಿಸಬಹುದು.