ಚಂದ್ರೇಗೌಡ ಪುತ್ಥಳಿ ತೆರವು: ಕುರುಬ ಸಮಾಜ ಆಕ್ರೋಶ

ಕೋಲಾರ: ಬಂಗಾರಪೇಟೆ ಪಟ್ಟಣದಲ್ಲಿ ಕಾಂಗ್ರೆಸ್​ ಕಚೇರಿ ಎದುರು ಸ್ಥಾಪಿಸಿದ್ದ ಚಂದ್ರೇಗೌಡ ಪುತ್ಥಳಿ‌ಯನ್ನು ಪುರಸಭೆ ಅಧಿಕಾರಿಗಳು ಇಂದು ಬೆಳಗ್ಗೆ ತೆರವುಗೊಳಿಸಿದ್ದಾರೆ.
ಕಾಂಗ್ರೆಸ್​ ಕಚೇರಿ ಪಕ್ಕದಲ್ಲಿರುವ ಪಾರ್ಕಿನಲ್ಲಿ ಕುರುಬ ಸಮಾಜದ ಪ್ರಭಾವಿ ಮುಖಂಡ ಹಾಗೂ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಚಂದ್ರೇಗೌಡ ಪುತ್ಥಳಿಯನ್ನು ನಿರ್ಮಿಸಲಾಗಿತ್ತು. ಪುರಸಭೆ ಅಧಿಕಾರಿಗಳು ಇಂದು ಬೆಳಗ್ಗೆ ಪುತ್ಥಳಿಯನ್ನು ತೆರವು ಮಾಡಲು ಬಂದಾಗ ಕುರುಬ ಸಮಾಜದ ಮುಖಂಡರು ತೆರವು ಮಾಡದಂತೆ ಪ್ರತಿಭಟನೆ ನಡೆಸಿದ್ದಾರೆ. ಚುನಾವಣೆ ನಂತರ ಪುತ್ಥಳಿ ತೆರವು ಮಾಡಿದಕ್ಕೆ ಸಮುದಾಯದ ಮುಖಂಡರು ಆಕ್ರೋಶಗೊಂಡಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ನಿಯೋಜನೆ ಮಾಡಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv