ಚಂದ್ರಬಾಬು ನಾಯ್ಡುಗೆ ಸೀನಿಯರ್​ ಎಂದು ಮೋದಿ ಟಾಂಗ್​..!

ಗುಂಟೂರು (ಆಂಧ್ರ ಪ್ರದೇಶ): ಚಂದ್ರಬಾಬು ನಾಯ್ಡು ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮರೆತು, ತಮ್ಮ ಕುಟುಂಬದೊಂದಿಗೆ ಅರಾಮವಾಗಿದ್ದಾರೆ ಎಂದು ಆಂಧ್ರಪದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು Sun Rise​ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ಅಭಿವೃದ್ಧಿ ಕೆಲಸಗಳನ್ನು ಮರೆತು ತಮ್ಮ ಕುಟುಂಬದೊಂದಿಗೆ Son Rise ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಕಳೆದ ವರ್ಷ ಎನ್​ಡಿಎ ಸರ್ಕಾರದಿಂದ ಚಂದ್ರಬಾಬು ನಾಯ್ಡು ಹೊರಬಂದು ಟಿಡಿಪಿ ಪಕ್ಷದ ತಮ್ಮ ವರ್ಚಸ್ಸನ್ನು ಆಂಧ್ರಪ್ರದೇಶದಲ್ಲಿ ಉಳಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಇನ್ನು, ಚಂದ್ರಬಾಬು ನಾಯ್ಡು ಅವರು ನಾನು ಪ್ರಧಾನಿ ಮೋದಿಗಿಂತ ಹಿರಿಯ ಎಂದಿದ್ದರು. ಆತನ ಆಹಂಕಾರಕ್ಕೆ ನಾವು ಸರ್​​ ಎಂದು ಸಮಾಧಾನಪಡಿಸಬೇಕಿದೆ. ಅಲ್ಲದೇ, ಟಿಡಿಪಿ ಹಲವು ವಿಷಯಗಳಲ್ಲಿ ಸೀನಿಯರ್​ ಸ್ಥಾನ ಪಡೆದುಕೊಂಡಿದೆ ಎಂದು ಮೋದಿ ವ್ಯಂಗ್ಯವಾಡಿದರು.

ಅಲ್ಲದೇ, ಆಂಧ್ರಪದೇಶದ ಎನ್​ಟಿಆರ್​​ ಅವರು ಕಾಂಗ್ರೆಸ್​ ಮುಕ್ತ ಭಾರತ ನಿರ್ಮಿಸಲು ಹೊರಟಿದ್ದರು. ಆದರೆ, ಚಂದ್ರಬಾಬು ನಾಯ್ಡು ವಿರೋಧ ಪಕ್ಷಗಳಿಗೆ ಆರೋಪ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಅವರ ಆರೋಪ ಅಪವಿತ್ರವಾಗಿದ್ದು, ಎನ್​ಟಿಆರ್​ ಅವರು ಕಾಂಗ್ರೆಸ್​ ಮುಕ್ತ ಭಾರತ ನಿರ್ಮಿಸಲು ಹೊರಟಿದ್ದರು, ಆದರೆ ಚಂದ್ರಬಾಬು ಕಾಂಗ್ರೆಸ್​​ನ ದಾರಿ ಹಿಡಿದಿದ್ದಾರೆ ಎಂದು ಗುಡುಗಿದರು.

ಪ್ರಧಾನಿ ಭೇಟಿ ಖಂಡಿಸಿ, ಟಿಡಿಪಿ ಕಾರ್ಯಕರ್ತರ ಪ್ರತಿಭಟನೆ
ಇನ್ನು, ಆಂಧ್ರಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ಖಂಡಿಸಿ, ಫ್ಲೆಕ್ಸ್​​, ಬ್ಯಾನರ್ಸ್​, ಭಾವಚಿತ್ರಗಳನ್ನು ಹರಿದು ಹಾಕಿ, ಟಿಡಿಪಿ ಬೆಂಬಲಿಗರು ಕಪ್ಪು ಬಲೂನ್​ಗಳನ್ನು ಪ್ರದರ್ಶಿಸಿದರು. ಪ್ರತಿಭಟನೆಗೆ ಆಂಧ್ರಪ್ರದೇಶದ ಸಿಎಂ ಅವರೇ ತಮ್ಮ ಪಕ್ಷದ ಬೆಂಬಲಿಗರಿಗೆ ಕರೆ ನೀಡಿದ್ದರು. ಪ್ರಧಾನಿ ನಮ್ಮ ರಾಜ್ಯದಲ್ಲಿ ಹೆಜ್ಜೆ ಇಡುತ್ತಿರುವುದು ಕರಾಳ ದಿನ. ಇದರಿಂದಾಗಿ ನಮ್ಮ ಪವಿತ್ರ ನೆಲ ಅಪವಿತ್ರವಾಗುತ್ತದೆ. ನಮ್ಮ ರಾಜ್ಯದಲ್ಲಿ ತನ್ನದೇ ಆದ ಘನತೆಯನ್ನು ಹೊಂದಿದೆ ಎಂದು ಚಂದ್ರಬಾಬು ನಾಯ್ದು ಬೆಂಬಲಿಗರಿಗೆ ದೂರವಾಣಿ ಮೂಲಕ ನಿನ್ನೆ ಹೇಳಿದ್ದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv