ಮಹಾಘಟಬಂಧನದಿಂದ ಮೋದಿ ಓಡಿ ಹೋಗುವುದು ಗ್ಯಾರಂಟಿ: ಚಂದ್ರಬಾಬು ನಾಯ್ಡು

ರಾಯಚೂರು: ರಾಹುಲ್ ಗಾಂಧಿ ಪ್ರಚಾರ ಸಮಾವೇಶದಲ್ಲಿ ಇಂದು ಆಂಧ್ರಪ್ರದೇಶದ ಸಿಎಂ ಸಿಎಂ ಚಂದ್ರಬಾಬು ನಾಯ್ಡು ಕೂಡ ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ನಾಯ್ಡು,  ರಾಯಚೂರು ಜನರಿಗೆ ನಮಸ್ಕಾರಗಳು. ಆಂಧ್ರ ಹಾಗೂ ಕನ್ನಡದ ಜನರು ಬೆರತು ಹೋಗಿದ್ದಾರೆ. ರಾಯಚೂರಿನಲ್ಲಿ ಮಾತನಾಡುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಎಂದು ಹೇಳಿದ್ರು. ಅಲ್ಲದೇ, ಮಹಾ ಘಟಬಂಧನದಿಂದ ನರೇಂದ್ರ ಮೋದಿ ಓಡಿ ಹೋಗುವುದು ಗ್ಯಾರಂಟಿ. ಕರ್ನಾಟಕ ಒಂದು ಸುಂದರವಾದ ರಾಜ್ಯ. ಯಾರಾದರು ಐಟಿ ಬಗ್ಗೆ ಮಾತಾಡಿದರೆ ಅದು ಕರ್ನಾಟಕ ಮತ್ತು ಆಂದ್ರ ಪ್ರದೇಶದ ಬಗ್ಗೆ ಮಾತನಾಡುವಂತಾಗಿದೆ. ಬಿಜೆಪಿ ಹೊರತು ಪಡಿಸಿ ಬೇರೆ ಸರ್ಕಾರ ಬರ ಬೇಕಾಗಿದೆ. ಐದು ವರ್ಷದಲ್ಲಿ ಮೋದಿ ಏನೂ ಕೆಲಸ ಮಾಡಿಲ್ಲ. ಕೇವಲ ಪೊಳ್ಳು ಆಶ್ವಾಸನೆ, ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ದೇಶದ ಜನರಿಗೆ ಮೋಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನೋಟು ರದ್ದಿನಿಂದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಐಐಟಿ ರಾಯಚೂರಿಗೆ ಬರಬೇಕಾದ್ರೆ ಬಿಜೆಪಿ ತೊಲಗಿ ಕಾಂಗ್ರೆಸ್​ ಬರಬೇಕಾಗಿದೆ. ನರೇಂದ್ರ ಮೋದಿ ಆಂಧ್ರಕ್ಕೆ ಮೋಸ ಮಾಡಿದ್ದಾರೆ ಎಂದು ನರೇಂದ್ರ ಮೋದಿ ವಿರುದ್ಧ ಅವರು ಕಿಡಿಕಾರಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv