ಕುಮಾರಸ್ವಾಮಿ ಸಿಎಂ ಆಗೋ ಭಾಗ್ಯ, ಹಾಸನದಲ್ಲಿ ಹರ್ಷೋದ್ಗಾರ

ಹಾಸನ: ಇಂದು ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರು ವಿಶ್ವಾಸಮತ ಯಾಚನೆ ಮಾಡಬೇಕಿತ್ತು. ಆದರೆ ಯಡಿಯೂರಪ್ಪ ಬಹುಮತ ಸಾಬೀತು ಮಾಡುವ ಮೊದಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಈ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಸಿಎಂ ಆಗೋ ಭಾಗ್ಯ ಸಿಕ್ಕಿದೆ. ಇದರಿಂದಾಗಿ ಕುಮಾರಸ್ವಾಮಿ ತವರು ಜಿಲ್ಲೆ ಹಾಸನದಲ್ಲಿ ಸಂಭ್ರಮ ಮನೆಮಾಡಿದೆ. ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಹರ್ಷದಿಂದ ಜಯಘೋಷ ಕೂಗಿದರು. ಹೇಮಾವತಿ ಪ್ರತಿಮೆ‌ ಎದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೊತೆಗೆ ಪರಸ್ಪರ ಸಿಹಿ ಹಂಚಿಕೊಂಡು ಕುಣಿದು ಕುಪ್ಪಳಿಸಿದರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv