ಪ್ರಚಾರದ ವೇಳೆ ಎದುರಾಳಿಗಳಿಗೆ ದರ್ಶನ್​ ಹೇಳಿದ್ರು ಹುಲಿ-ಬೆಕ್ಕಿನ ಕಥೆ..!

ಮೈಸೂರು: ಸುಡು ಬಿಸಿಲಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಜಿಲ್ಲೆಯ ಕೆ ಆರ್ ನಗರದ ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಱಲಿ ನಡೆಸುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಮತ ಯಾಚನೆ ವೇಳೆ ದರ್ಶನ್​ ಲಕ್ಷ್ಮಿಪುರ ಗ್ರಾಮದ ಜನರಿಗೆ ಹುಲಿ ಬೆಕ್ಕು ಕಥೆ ಹೇಳಿದರು. ಬೇಟೆ ಆಡುವಾಗ ಹುಲಿ ಎದುರಾಳಿಯ ಕುತ್ತಿಗೆಗೆ ಬಾಯಿ ಹಾಕುತ್ತೆ.. ಆದ್ರೆ, ಅದೇ ಬೆಕ್ಕನ್ನು ಪ್ರೀತಿಯಿಂದ ನೋಡಿಕೊಂಡಾಗ ನಾವು ಏನ್ ಮಾಡಿದ್ರೂ ಮಾಡಿಸಿಕೊಳ್ಳುತ್ತೆ. ಅದೇ ಆ ಬೆಕ್ಕನ್ನು ರೂಮ್​ನಲ್ಲಿ ಕೂಡಿ ಹಾಕಿ ಎರಡು ಏಟು ಹೊಡೀರಿ ಆಗ ಬೆಕ್ಕು, ಹುಲಿ ಏನು ಅದರಪ್ಪನ ಹಾಗೆ ಕುತ್ತಿಗೆಗೆ ಬಾಯಿ ಹಾಕುತ್ತೆ. ಯಾಕಂದ್ರೆ ಅಲ್ಲಿವರೆಗೂ ಅದು ಅಭಿಮಾನದಿಂದ ಇರುತ್ತೆ. ಯಾವಾಗ ಅದರ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತೋ ಆಗ ಅದು ಯಾರು ಆದ್ರೂ ಬಿಡಲ್ಲ. ಹಾಗೆ ಈ ಸಲ ಸ್ವಾಭಿಮಾನದ ಚುನಾವಣೆ, ನಿಮ್ಮ ಮತ ಸ್ವಾಭಿಮಾನಕ್ಕಾಗಿ ಸುಮಮ್ಮಗೆ ಮತ ಹಾಕಿ ಅಂತಾ ದರ್ಶನ್​ ಎದುರಾಳಿಗಳಿಗೆ ಟಾಂಗ್​ ನೀಡಿ ಮತ ಕೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv