ದಾಳಿ ಮಾಡಿದ್ದು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳಲ್ಲ -ದರ್ಶನ್

ಮಂಡ್ಯ: ಫಾರ್ಮ್ ಹೌಸ್ ಮೇಲೆ  ದಾಳಿ ಮಾಡಿದ್ದು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳಲ್ಲ. ಐಟಿ ಅಧಿಕಾರಿಗಳು ಏನಕ್ಕೆ ದಾಳಿ ಮಾಡುತ್ತಾರೆ. ನನ್ನದೆಲ್ಲ ಕರೆಕ್ಟ್ ಆಗಿದೆ. ನಾವೂ ಇಲ್ಲಿ ಓಡಾಡುತ್ತಿದ್ದೇವಲ್ಲ. ಅಲ್ಲಿ ಏನಾದ್ರೂ ಸಿಗಬಹುದು ಅಂತಾ ಮಾಡಿದ್ದಾರೆ. ಅಲ್ಲಿಗೋದ್ರೆ ಏನ್ ಸಿಗುತ್ತೆ ಸಾರ್. ಬರೀ ಕಡ್ಲೇ ಹಿಟ್ಟು, ಬೂಸಾ, ಹಿಂಡಿ, ಹಾಲು, ಬಿದ್ದಿರೋ ತೆಂಗಿನಕಾಯಿ ಸಿಗಬಹುದು ಅಷ್ಟೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫಾರ್ಮ್ ಹೌಸ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ಪಾಂಡವಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನ್​, ಏತಕ್ಕಾಗಿ ದಾಳಿ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅಭಿಮಾನಿಗಳೇ ಖರ್ಚಿಗೆ ಹಣ ಕೊಡುತ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಂಡ್ರೇ ಸಾಕು ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣೆ ಮುಗಿದ ಬಳಿಕ ನಟರು ನಿಮಗೆ ಸಿಗುತ್ತಾರಾ ಅನ್ನೋ ವಿಚಾರವಾಗಿ ಮಾತನಾಡಿದ ದರ್ಶನ್​, ನಾವೆಲ್ಲೂ ಹೇಳಿಕೊಂಡು ಮಾಡಲ್ಲ, ಮಾಡೋದನ್ನ ಮಾಡ್ತಿರುತ್ತೇವೆ. ಪ್ರತಿ ಭಾನುವಾರ ನಮ್ಮ ಮನೆ ಹತ್ತಿರ ಬಂದು ನೀವೇ ನೋಡಿ. ಅವತ್ತು ನಾನು ಎಲ್ಲರಿಗೂ ಸಿಗುತ್ತೇನೆ. ನಾನೇ ಡೈಲಿ ಅಭಿಮಾನಿಗಳಿಗೆ ಹೇಳುತ್ತೇನೆ. ಸೋಮವಾರದಿಂದ ಶನಿವಾರದ ತನಕ ಕೆಲಸ ಮಾಡಿ, ಭಾನುವಾರ ಆರಾಮವಾಗಿರಿ ಅಂತೀನಿ. ಈ ಬಾರಿ ನಾವೂ ಚುನಾವಣೆಗೆ ಬಂದಿರೋದು ಸ್ವಾಭಿಮಾನಕ್ಕಾಗಿ. ಅಭಿಮಾನ ಪಕ್ಕಕ್ಕಿಟ್ಟು, ಸ್ವಾಭಿಮಾನಕ್ಕಾಗಿ ಬಂದಿದ್ದೇವೆ. ಅಮ್ಮ ಫಸ್ಟ್ ಟೈಮ್ ಸ್ಪರ್ಧೆ ಮಾಡಿದ್ದಾರೆ. ಇದೊಂದು ಬಾರಿ ಅವಕಾಶ ಮಾಡಿಕೊಡಿ ಸಾಕು. ನೆಕ್ಸ್ಟ್ ಟೈಮ್ ಪ್ರಚಾರಕ್ಕೆ ಬಂದಾಗ ಏನ್ ಮಾಡಿದ್ದರಾಂತ ಕೇಳಿ. ಟೀಕೆ ಟಿಪ್ಪಣಿ ಅವರಿಗೆ ಅಭ್ಯಾಸ ಆಗೋಗಿದೆ. ನಾವೂ ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನೊಂದು ಕೊಳ್ಳಲ್ಲ ಎಂದು ಹೇಳಿದರು.

ನಾಳೆ ಪ್ರಚಾರಕ್ಕೆ ಕ್ಲೈಮ್ಯಾಕ್ಸ್ ವಿಚಾರವಾಗಿ ಮಾತನಾಡಿದ ದರ್ಶನ್​​, ನಾಳೆ ಸ್ವಾಭಿಮಾನದ ರ‌್ಯಾಲಿ ಆಗುತ್ತೆ. ರಜನಿಕಾಂತ್ ಬರ್ತಾರೆ ಅನ್ನೋದು ಸುಳ್ಳು. ನಾವೂ ನಾಲ್ಕು ಜನ ರ‌್ಯಾಲಿಯಲ್ಲಿ ಭಾಗಿಯಾಗುತ್ತೇವೆ. ಬೇರೆ ಯಾರೂ ಬರಲ್ಲ. ಎಲ್ಲಾ ಕಡೆ ತುಂಬಾ ಚೆನ್ನಾಗಿದೆ, ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv