ಸದ್ದಿಲ್ಲದೇ ನಡೀತಿದೆ ದಚ್ಚು ‘ರಾಬರ್ಟ್​’..! ತರುಣ್​ ಬಿಚ್ಚಿಟ್ಟ ಸೀಕ್ರೆಟ್​..!

‘ಚಾಲೆಂಜಿಂಗ್ ಸ್ಟಾರ್​’ ದರ್ಶನ್​ ನಟನೆಯ ‘ಯಜಮಾನ’ ಇವತ್ತಿಗೆ ಹಾಫ್​ ಸೆಂಚುರಿ ಬಾರಿಸಿ, ಸೆಂಚುರಿಯತ್ತ ಮುನ್ನುಗ್ಗುತ್ತಿದೆ. ವರ್ಷಗಳ ನಂತರ ‘ಯಜಮಾನ’ನ ಆಗಮನ ಅಭಿಮಾನಿಗಳಲ್ಲಿ ಸಂಭ್ರಮ ತಂದಿತ್ತು. ಇದರಿಂದ ‘ಚಕ್ರವರ್ತಿ’ಯ ಮುಂದಿನ ಸಿನಿಮಾಗಳ ಬಗ್ಗೆಯೂ ಕುತೂಹಲ ಹುಟ್ಟಿಸಿತ್ತು. ಕುರುಕ್ಷೇತ್ರ, ಒಡೆಯ ಸಿನಿಮಾಗಳ ಬಗ್ಗೆಯೂ ದೊಡ್ಡ ನಿರೀಕ್ಷೆ ಸೃಷ್ಟಿಸಿದೆ. ಇದರ ನಡುವೆ ‘ರಾಬರ್ಟ್’ ಸಿನಿಮಾ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಸಿನಿಮಾದ ಕಥೆ ಎಲ್ಲಿಗೆ ಬಂತು..? ಯಾವ ಹಂತದಲ್ಲಿದೆ..? ಎಂಬಂತಹ ಪ್ರಶ್ನೆ ಕಾಡುತ್ತಿದ್ದವು. ಇದೀಗ ಅಭಿಮಾನಿಗಳು ಖುಷಿ ಪಡುವಂತಹ ಸುದ್ದಿ ಬಂದಿದೆ.

ಬಿಡುವಿಲ್ಲದೇ ನಡೀತಿದೆ ಕೆಲಸ..!
ದರ್ಶನ್​ ನಟನೆಯ ಕುರುಕ್ಷೇತ್ರ ಬಿಡುಗಡೆಗೆ ಎದುರು ನೋಡುತ್ತಿದೆ. ಚುನಾವಣಾ ಪ್ರಚಾರದ ನಡುವೆಯೂ ಒಡೆಯ ಸಿನಿಮಾದ ಚಿತ್ರೀಕರಣ ಸಾಗಿದೆ. ಸಿಕ್ಕ ಸಮಯದಲ್ಲೇ ದರ್ಶನ್​ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೀಗ ಇಷ್ಟರಲ್ಲೇ ಶೂಟಿಂಗ್​ನಲ್ಲಿ ಭಾಗಿಯಾಗೋಕೆ ದರ್ಶನ್​ ಸಿದ್ಧರಾಗ್ತಿದ್ದಾರೆ. ಈ ಮಧ್ಯೆ ‘ರಾಬರ್ಟ್​’ ಸಿನಿಮಾ ಕುರಿತು ಚರ್ಚೆಯಾಗಿತ್ತು. ಆದರೆ ಲೋಕಸಭಾ ಚುನಾವಣೆಯ ದಿನವೇ ನಿರ್ದೇಶಕ ತರುಣ್​ ಸುಧೀರ್ ಸ್ವೀಟ್ ನ್ಯೂಸ್​ ಕೊಟ್ಟಿದ್ದಾರೆ. ತರುಣ್​ ಮತದಾನದ ನಂತರ ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡಿದ್ದರು. ‘ನಾನು ನನ್ನ ಕರ್ತವ್ಯ ನಿಭಾಹಿಸಿದ್ದೇನೆ.. ನೀವು ಮಾಡಿ ಅಂತಾ’ ತಿಳಿಸಿದ್ದರು. ವಿಷಯ ಏನೆಂದರೇ ತರುಣ್​ ಹಂಚಿಕೊಂಡಿದ್ದ, ಫೋಟೊ ದಚ್ಚು ಅಭಿಮಾನಿಗಳಿಗೆ ಖುಷಿ ತಂದಿತ್ತು. ಯಾಕೆಂದ್ರೆ ಆ ಫೋಟೊನಲ್ಲಿ ‘ರಾಬರ್ಟ್​’ ಸಿನಿಮಾದ ಸ್ಕ್ರಿಪ್ಟ್​ ಕೂಡ ಇತ್ತು. ಈ ಮೂಲಕ ‘ರಾಬರ್ಟ್​’ ಸಿನಿಮಾದ ಕೆಲಸ ಭರದಿಂದ ಸಾಗುತ್ತಿದೆ.. ಇಷ್ಟರಲ್ಲೇ ಸೆಟ್ಟೇರಲಿದೆ.. ಎಂಬ ಮಾಹಿತಿಯನ್ನು ತರುಣ್​ ಬಿಚ್ಚಿಟ್ಟಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv