‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಈಗ ದರ್ಶನ್​ ತೂಗುದೀಪ..! ಹೆಸರು ಬದಲಿಸಿಕೊಂಡ ದಚ್ಚು..!

‘ಚಾಲೆಂಜಿಂಗ್​ ಸ್ಟಾರ್’​ ದರ್ಶನ್​ ಆ ಹೆಸರಲ್ಲೇ ಒಂದು ಪವರ್​ ಇದೆ. ದರ್ಶನ್​ ಅಭಿನಯದ ಆಲ್​ಮೋಸ್ಟ್ ಎಲ್ಲಾ ಸಿನಿಮಾಗಳ ಟೈಟಲ್​ ಕಾರ್ಡ್​ನಲ್ಲಿ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅಂತ ಇರುತ್ತೆ. ಅಸಲಿ ವಿಷಯ ಏನಪ್ಪ ಅಂದ್ರೆ 2003ರಲ್ಲಿ ‘ನನ್ನ ಪ್ರೀತಿಯ ರಾಮು’ ಸಿನಿಮಾದ ನಂತರ ದರ್ಶನ್​ಗೆ ‘ಚಾಲೆಂಜಿಂಗ್​ ಸ್ಟಾರ್​’ ಅಂತಾ ಬಿರುದು ಬಂತು. ಅಲ್ಲಿಂದ ಇಲ್ಲಿಯವರೆಗೂ ಅವ್ರ ಸಿನಿಮಾಗಳ ಟೈಟಲ್​ ಕಾರ್ಡ್​​ನಲ್ಲಿ ’ಚಾಲೆಂಜಿಂಗ್​ ಸ್ಟಾರ್​ ದರ್ಶನ್​’ ಅಂತಲೇ ಬರ್ತಿದೆ. ಹಿರಿಯ ನಟ ತೂಗುದೀಪ ಶ್ರೀನಿವಾಸ್​ ಅವ್ರ ಮಗ ಆಗಿರೋದ್ರಿಂದ ದರ್ಶನ್​ ತೂಗುದೀಪ ಅಂತಲೇ ಫೇಮಸ್ ಆಗಿದ್ದರು. ಇದೀಗ ಸಿನಿಮಾ ಥಿಯೇಟರ್​ನಲ್ಲೂ ‘ದರ್ಶನ್​ ತೂಗುದೀಪ’ರಾಗಿ ಮಿಂಚಲು ಸಿದ್ಧರಾಗ್ತಿದ್ದಾರೆ.
ಟ್ವಿಟ್ಟರ್​, ಫೇಸ್ಬುಕ್ ಆಯ್ತು ಈಗ ಸಿನಿಮಾ..!
ದರ್ಶನ್​ ತಮ್ಮ ಟ್ವಿಟ್ಟರ್​, ಫೇಸ್ಬುಕ್​, ಇನ್​ಸ್ಟ್ರಾಗ್ರಾಂ ಎಲ್ಲಾ ಕಡೆಯಲ್ಲೂ ದರ್ಶನ್​ ತೂಗುದೀಪ ಅಂತಲೇ ಇದೆ. ಇದೀಗ ತಮ್ಮ ಸಿನಿಮಾದ ಟೈಟಲ್​ ಕಾರ್ಡ್​​ನಲ್ಲೂ ‘ದರ್ಶನ್​ ತೂಗುದೀಪ’ರಾಗಿ ಮಿಂಚಲು ಸಿದ್ಧರಾಗಿದ್ದಾರೆ. ಕುರುಕ್ಷೇತ್ರ ಸಿನಿಮಾ ಬದಲಾಗಿ ಅವ್ರ 50ನೇ ಸಿನಿಮಾವಾಗಿ ಯಜಮಾನ ರಿಲೀಸ್​ ಆಗ್ತಿದೆ. ಸಿನಿಮಾ ಟ್ರೈಲರಂತೂ ಅಕ್ಷರಸಃ ಧೂಳೆಬ್ಬಿಸಿದೆ. ವಿಷಯವೇಂದರೇ ಟ್ರೈಲರ್​ನಲ್ಲಿ ಗಮನಿಸಬೇಕಾದ ಅಂಶವಿದೆ. ಅದೇನಂದ್ರೆ ಟ್ರೈಲರ್​ನಲ್ಲಿರುವ ಟೈಟಲ್​ ಕಾರ್ಡ್​ನಲ್ಲಿ ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್​ ಬದಲಾಗಿ ‘ದರ್ಶನ್​ ತೂಗುದೀಪ’ ಅಂತಾ ಬದಲಾಯಿಸಿಕೊಂಡಿದ್ದಾರೆ. ಅದ್ರಲ್ಲೂ ‘ಯಜಮಾನ’ದಂತಹ ಮೈಲ್​ ಸ್ಟೋನ್​ ಸಿನಿಮಾದಿಂದಲೇ ಟೈಟಲ್​ ಕಾರ್ಟ್​ ಬದಲಾಗ್ತಿರೋದು ಮತ್ತೊಂದು ವಿಶೇಷ.