ನಾಯಿ ತರಬೇಕು ಅಂದ್ರೂ ₹5 ಸಾವಿರ ಕೊಡಬೇಕು, ಆದ್ರೆ ₹500-₹1000 ನಿಮ್ಮ ಮತ ಮಾರ್ಕೋತೀರಾ?

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಇಂದು ಜಿಲ್ಲೆಯ ಪಶುಪತಿ ಗ್ರಾಮದಲ್ಲಿ ದರ್ಶನ್ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಲು ಮುಂದಾದ್ರು. ಈ ವೇಳೆ ದರ್ಶನ್  ಮಾತನಾಡಲು ಶುರು ಮಾಡುತ್ತಿದ್ದಂತೆ ಅಭಿಮಾನಿಗಳು ಕಿರುಚಲು ಆರಂಭಿಸಿದರು. ನೀವು ಕಿರುಚಾಡುತ್ತಿದ್ದರೆ ಯಾವುದೇ ಪ್ರಯೋಜನ ಆಗಲ್ಲ. ನಾನು ಯಾಕೆ ಬಂದಿದ್ದೀನಿ. ನಾನು ಏನ್ ಮಾತಾಡ್ತೀನಿ ಎಂದು ಹೇಳೋದನ್ನ ಪೂರ್ತಿಯಾಗಿ ಕೇಳಿಸಿಕೊಳ್ಳಿ. ನಾನು ಯಾಕೆ ಹೇಳ್ತಿದ್ದೀನಿ ಅಂದ್ರೆ, ಒಂದು ಸಣ್ಣ ಕಥೆ ಹೇಳ್ತೀನಿ ಎಂದು ದರ್ಶನ್ ತಮ್ಮ ಮಾತು ಆರಂಭಿಸಿದ್ರು.

‘ ನಿಮ್ಮ ಸ್ವಾಭಿಮಾನದ ಮತ ಹಾಕಿ’

ಹುಲಿಗಳು ಬೇಟೆಯಾಡುತ್ತವೆ. ಅವು ಎಲ್ಲಿ ಹಿಡಿಯುತ್ತವೆ ಅಂದ್ರೆ ಕತ್ತಿಗೆ ಹಿಡಿಯುತ್ತವೆ. ಅದೇ ನಿಮ್ಮ ಸಾಕಿದ ಬೆಕ್ಕು ಮರಿಯನ್ನು ನೀವು ಮುದ್ದು ಮಾಡ್ತೀರಾ. ಊಟ ಹಾಕ್ತೀರಾ. ಎಲ್ಲಾ ಮಾಡ್ತೀರಾ. ಆದ್ರೆ ಅದನ್ನು ಒಂದು ರೂಂನಲ್ಲಿ ಹಾಕ್ಬಿಟ್ಟು, ಎರಡೇ ಎರಡು ಏಟು ಹೊಡಿರಿ. ಆಗ ಹುಲಿಯೇನು ಏನು ಹಿಡಿಯೋದು, ಅದರಪ್ಪಾನಾಗ ಅದು ಬಂದು ಕತ್ತು ಹಿಡಿಯುತ್ತೆ. ಯಾಕೆ ಅಂದ್ರೆ ಅಲ್ಲಿಯವರೆಗೂ ಅದು ತುಂಬಾ ಅಭಿಮಾನದಿಂದ ಇರುತ್ತೆ. ಆದ್ರೆ ಒಂದು ಸಲ ಅದರ ಸ್ವಾಭಿಮಾನಕ್ಕೆ ಧಕ್ಕೆ ಬಂದು ಬಿಟ್ಟರೆ. ಅದು ಯಾರೇ ಆದ್ರೂ ಬಿಡಲ್ಲ. ಹಾಗೇ ಈ ಸಲ ನಿಮ್ಮ ಒಂದು ಮತ ಸ್ವಾಭಿಮಾನದ ಮತ. ನಿಮ್ಮ ಅತ್ಯಮೂಲ್ಯ, ಸ್ವಾಭಿಮಾನದ ಮತವನ್ನು ದಯವಿಟ್ಟು ಅವರಿಗೆ ಹಾಕಿ. ಮನೆಯಲ್ಲಿ ಒಂದು ಜೊತೆ ಎತ್ತು ತೆಗೋಬೇಕು ಅಂದ್ರೆ ₹ 1 ವರೆ ಲಕ್ಷ ಖರ್ಚು ಮಾಡ್ತೀವಿ. ಅದೇ ಒಂದು ಒಳ್ಳೆಯ ಹಸು ತೆಗೋಬೇಕು ಅಂದರೂ ₹ 85 ರಿಂದ ₹ 90 ಸಾವಿರ ಖರ್ಚು ಮಾಡ್ತೀವಿ. ಒಂದು ಕುರಿ ತೆಗೋಬೇಕು ಅಂದ್ರೆ ₹ 15 ರಿಂದ ₹ 20 ಸಾವಿರ ಖರ್ಚು ಮಾಡ್ತೀವಿ. ಮನೆಗೆ ಸುಮ್ಮನೆ ಒಂದು ನಾಯಿ ತಗೊಂಡು ಬರಬೇಕು ಅಂದ್ರೂ, ₹ 5 ಸಾವಿರ  ಖರ್ಚು ಮಾಡ್ತೀವಿ. ಆದ್ರೆ ₹ 500 , ₹ 1000 ಸಾವಿರಗೆ ಮತ ಹಾಕಿ, ನಾಳೆ ದಿನ ಪ್ರಾಣಿಗಳಿಗಿಂತಲೂ ನಾವು ಕಮ್ಮಿ ಅಂತಾ ತೋರಿಸ್ಕೋಳೋದು ಬೇಡ. ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ನಿಮ್ಮ ಹಕ್ಕನ್ನು ಚಲಾಯಿಸಿ, ನಿಮ್ಮ ಅಧಿಕಾರವನ್ನು ಉಳಿಸಿಕೊಳ್ಳಿ ಎಂದು ನಟ ದರ್ಶನ್ ಕರೆ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv