ಹಳ್ಳಿಗಳಲ್ಲೂ ಶುರುವಾಯ್ತು ಸರಗಳ್ಳರ ಹಾವಳಿ..!

ಕೋಲಾರ: ನಗರಗಳಿಗೆ ಸಿಮೀತವಾಗಿದ್ದ ಸರಗಳ್ಳರ ಹಾವಳಿ ಈಗೀಗ ಹಳ್ಳಿಗಳಲ್ಲೂ ಶುರುವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೋಲಾರ ತಾಲೂಕಿನ ಬೆಟ್ಟಬೆಣಜೇನಹಳ್ಳಿ ಗ್ರಾಮದಲ್ಲಿ ವಿಜಯಲಕ್ಷ್ಮಿ ಎಂಬುವವರ 40 ಗ್ರಾಂ ಚಿನ್ನದ ಸರವನ್ನು ಸರಗಳ್ಳರು ದೋಚಿ ಪರಾರಿಯಾಗಿದ್ದಾರೆ. ಬೈಕ್ ನಲ್ಲಿ‌ ಬಂದ ದುಷ್ಕರ್ಮಿಗಳು ಮಹಿಳೆಯ ಚಿನ್ನದ ಸರ ದೋಚಿ ಪರಾರಿ ಆಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸ್ತಿದ್ದಾರೆ.