ಬೆಳ್ಳಂಬೆಳಗ್ಗೆ ವೃದ್ಧೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ದುಷ್ಕರ್ಮಿ..!

ಹುಬ್ಬಳ್ಳಿ: ನಗರದಲ್ಲಿ ಖದೀಮರ ಹಾವಳಿ ಮುಂದುವರೆದದಿದ್ದು, ಬೆಳಂಬೆಳಗ್ಗೆ ದುಷ್ಕರ್ಮಿಯೊಬ್ಬ ವೃದ್ಧೆಯ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾನೆ. ವಿಶ್ವೇಶ್ವರಯ್ಯ ನಗರದ ಹಳೇ ಉದ್ಯೋಗ ಕಚೇರಿ ಬಳಿ ಕಪ್ಪು ಪಲ್ಸರ್​ ಬೈಕ್​ನಲ್ಲಿ ಬಂದ ದುಷ್ಕರ್ಮಿ, 65 ವರ್ಷದ ರಾಜಾಬಾಯಿ ಬುರಲಿ ಎಂಬವರಿಂದ 140 ಗ್ರಾಂನ  ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ. ಮಾಜಿ ಸಂಸದ,‌ ಕಾಂಗ್ರೆಸ್ ಹಿರಿಯ ಮುಖಂಡ ಐಜಿ ಸನದಿಯವರ ಮನೆ ಮುಂಭಾಗವೇ ಈ ಘಟನೆ ನಡೆದಿದೆ. ಸರ ಕಿತ್ತು ಪರಾರಿಯಾಗುವ ವೇಳೆ ಸ್ಥಳೀಯ ಯುವಕನೊಬ್ಬ ಕಳ್ಳನ ಬೆನ್ನು ಹತ್ತಿದನಾದರೂ ಆತ ತಪ್ಪಿಸಿಕೊಂಡಿದ್ದಾನೆ. ಈ ಸಂಬಂಧ ಅಶೋಕ್​ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv