ಚಡಚಣ ಹತ್ಯೆ ಪ್ರಕರಣ: 5 ಆರೋಪಿಗಳು ದರ್ಗಾ ಜೈಲಿಗೆ ರವಾನೆ

ವಿಜಯಪುರ: ಭೀಮಾತೀರದ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಐದು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸುವಂತೆ ಇಂಡಿ ಜೆಎಮ್​ಎಫ್​​​ಸಿ ಕೋರ್ಟ್ ಇಂದು ಆದೇಶಿಸಿದೆ. ಜುಲೈ 24ರ ವರೆಗೆ ನ್ಯಾಯಾಂಗ ಬಂಧನ ಮುಂದುವರಿಯಲಿದ್ದು, ಆರೋಪಿಗಳಾದ ಮಹಾದೇವ ಸಾಹುಕಾರ್ ಬೈರಗೊಂಡ್, ಸಿದ್ದಗೊಂಡಪ್ಪ ಮುಡುವೆ, ಚಾಂದಹುಸೇನ್ ಚಡಚಣ, ಭೀಮನಗೌಡ ಬಿರಾದಾರ, ಭೀಮು ಪೂಜಾರಿ ಸೇರಿದಂತೆ 5 ಜನ ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ರವಾನಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv