ಭಾರೀ ಗಾಳಿ, ಜೋರು ಮಳೆ; ಧರೆಗುರುಳಿದ ಸೆಂಟ್ರಿಂಗ್ ಸ್ಟೇರ್ಸ್

ಬೆಂಗಳೂರು: ನಗರದಲ್ಲಿ ಸುರಿದ ಜೋರು ಮಳೆಗೆ ಕಟ್ಟಡ ನವಿಕರಣಗೊಳಿಸಲು ನಿರ್ಮಾಣ ಮಾಡಿದ್ದ ಸೆಂಟ್ರಿಂಗ್ ಸ್ಟೇರ್ಸ್ ಧರೆಗುರುಳಿದೆ. ನಗರದ ಎಂಜಿ ರಸ್ತೆಯಲ್ಲಿರೋ ಲಿಡೋ ಮಾಲ್​ನಲ್ಲಿ ಘಟನೆ ನಡೆದಿದ್ದು, ಪಕ್ಕದ ಕಟ್ಟಡ ಹಾಗೂ ಕೆಲವು ಕಾರ್​ಗಳಿಗೆ ಹಾನಿ ಉಂಟಾಗಿದೆ. ಅವೈಜ್ಞಾನಿಕವಾಗಿ ಸೆಂಟ್ರಿಂಗ್ ಸ್ಟೆರ್ಸ್ ನಿರ್ಮಾಣವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಹಲಸೂರು ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸ್ ದೌಡಾಯಿಸಿ ಧರೆಗುರುಳಿದ್ದ ಕಬ್ಬಿಣದ ರಾಡ್​ಗಳನ್ನು ತೆರವುಗೊಳಿಸಿದ್ದಾರೆ. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv