ಕಾಶ್ಮೀರಿ ಪ್ರತ್ಯೇಕವಾದಿಗಳ ರಕ್ಷಣೆಗೆ ಖರ್ಚಾಗುತ್ತಿದ್ದ ಹಣ ಎಷ್ಟು ಕೋಟಿ ಗೊತ್ತಾ..!?​

ನವದೆಹಲಿ: ಕಾಶ್ಮೀರಿ ಕಣಿವೆಯಲ್ಲಿ ಸ್ವತಂತ್ಯದ ಹೆಸರಿನಲ್ಲಿ ಉಗ್ರ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದ ಪ್ರತ್ಯೇಕ ವಾದಿಗಳಿಗೆ ವಿಶೇಷ ಭದ್ರತೆಯನ್ನು ಕೇಂದ್ರ ವಾಪಸ್​ ಪಡೆದಿದೆ. ಈ ಹಿನ್ನೆಲೆ ಭಾರತದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ಹಣ ಉಳಿತಾಯವಾಗಲಿದೆ. ಭದ್ರತೆ ಹಿಂಪಡೆಯುವ ಕುರಿತು ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ರು. ಇಂದು ಪ್ರತ್ಯೇಕವಾದಿಗಳಾದ ಮಿರ್ವೈಜ್ ಉಮರ್ ಫಾರಕ್‌, ಅಬ್ದುಲ್‌ ಘನಿ ಭಟ್, ಬಿಲಾಲ್ ಲೋನ್, ಹಶೀಮ್ ಖುರೇಷಿ ಮತ್ತು ಶಬೀರ್ ಶಾಗೆ ನೀಡಿದ್ದ ವಿಶೇಷ ಭದ್ರತೆಯನ್ನ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ ಮಲ್ಲಿಕ್‌ ವಾಪಸ್‌ ಪಡೆದಿದ್ದಾರೆ. 

ಪ್ರತ್ಯೇಕತಾವಾದಿಗಳಿಗೆ ಖರ್ಚು ಮಾಡಿದ್ದು ಎಷ್ಟು ಗೊತ್ತಾ..?
ಪ್ರತ್ಯೇಕತಾವಾದಿಗಳಿಗೆ ಭದ್ರತೆ ಒದಗಿಸಲು ಒಟ್ಟು 1000 ಜನ ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಆ ರಕ್ಷಣಾ ಸಿಬ್ಬಂದಿಗೆ ಅಂತಾನೇ ಕೇಂದ್ರ ಸರ್ಕಾರ ಸುಮಾರು ₹309 ಕೋಟಿ ಸಂಬಳ ಖರ್ಚು ಮಾಡುತ್ತಿತ್ತು. ಅಲ್ಲದೇ, ಭದ್ರತಾ ಸಿಬ್ಬಂದಿಗೆ ₹506 ಕೋಟಿ ಖರ್ಚು ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಇನ್ನು 2010 ರಿಂದ 2015 ರವರಗೆ ಪ್ರತ್ಯೇಕತಾವಾದಿಗಳಿಗಾಗಿ ಇಷ್ಟು ಹಣವನ್ನು ಖರ್ಚು ಮಾಡಲಾಗಿದ್ದು, ನಂತರದ ವಿವರಗಳು ತಿಳಿದು ಬಂದಿಲ್ಲ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv