ಕೇಂದ್ರದ ಪರಾಮರ್ಶೆ ಸಭೆ: ಬಿಜೆಪಿಯ 4 ಶಾಸಕರು ಗೈರು

ಚಿತ್ರದುರ್ಗ: ಕೇಂದ್ರ ಸರ್ಕಾರದ ಯೋಜನೆಗಳ ಪರಾಮರ್ಶೆ ಸಭೆಗೆ ಬಿಜೆಪಿ ಶಾಸಕರು ನಿರುತ್ಸಾಹ ತೋರಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಾದ ನರೇಗಾ, ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಕಾಮಗಾರಿ ಸಭೆಗೆ ಬಿಜೆಪಿಯ ನಾಲ್ಕು ಶಾಸಕರು ಗೈರಾಗಿದ್ದಾರೆ.
ಸಂಸದ ಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ಸೌಭಾಗ್ಯ ಬಸವರಾಜನ್​​ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್​ನಲ್ಲಿ ಸಭೆ ನಡೆಯಿತು. ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್​​, ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ಹೊಸದುರ್ಗ ಶಾಸಕ ಶೇಖರ್​​ ಸಭೆಗೆ ಗೈರಾಗಿದ್ದಾರೆ. ಎಂಎಲ್​ಸಿ ರಘು ಅಚಾರ್​​, ವೈ.ಎ. ನಾರಾಯಣ ಸ್ವಾಮಿ ಕೂಡ ಸಭೆಯಲ್ಲಿ ಪಾಲ್ಗೊಂಡಿಲ್ಲ. ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಮತ್ತು ಚಳ್ಳಕೆರೆ ಶಾಸಕ ರಘುಮೂರ್ತಿ, ಎಂಎಲ್​ಸಿ ಜಯಮ್ಮ ಬಾಲರಾಜ್​ ಮಾತ್ರ ಹಾಜರಾಗಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv