’ಸಂಭ್ರಮ ಸಡಗರದ ಸಂತ ಆಂಥೋನಿ ಚರ್ಚ್ ವಾರ್ಷಿಕೋತ್ಸವ’

ಶಿವಮೊಗ್ಗ : ಶಾಂತಿ ನಗರದ ಸಂತ ಆಂಥೋನಿ ಚರ್ಚ್ ನಲ್ಲಿ ಇಂದು ವಾರ್ಷಿಕೋತ್ಸವ ಭಕ್ತಿ ಸಂಭ್ರಮ ಸಡಗರದಿದ ನೆರವೇರಿತು. ಪವಾಡ ಕ್ಷೇತ್ರವಾಗಿ ಗುರುತಿಸಿ ಕೊಂಡಿರುವ ಚರ್ಚ್ ನ ವಾರ್ಷಿಕೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಜರುಗಿದ್ದು ವಿಶೇಷವಾಗಿತ್ತು.

ಶಾಂತಿ ನಗರದ ಚಾನಲ್​ನ ಸೇತುವೆಯಿಂದ ಆರಂಭಗೊಂಡ ಅಡ್ಡಪಲ್ಲಕ್ಕಿಯನ್ನು 10 ರಿಂದ 16 ಜನ ಭಕ್ತರು ಹೊತ್ತು ಸಾಗುವ ಮೂಲಕ ಭಕ್ತಿ ಮೆರೆದರು. ಈ ಮೊದಲು ವಾರ್ಷಿಕೋತ್ಸವ ಅಂಗವಾಗಿ ತೇರಿನ ಮೆರವಣಿಗೆ ನಡೆಯುತ್ತಿತ್ತು. ಆದರೆ, ಈ ಬಾರಿ ಅಡ್ಡ ಪಲ್ಲಕ್ಕಿಯಲ್ಲಿ ಸಂತ ಆಂಥೋನಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಭಕ್ತರು ಚರ್ಚ್​ಗೆ ಆಗಮಿಸಿ ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸಿದರು. ಇದೇ ವೇಳೆ ಭಕ್ತರು ತಮ್ಮ ಪ್ರಾರ್ಥನೆ ಈಡೇರಿದ ಹಿನ್ನೆಲೆಯಲ್ಲಿ ತಂದಿದ್ದ ಸಾವಿರಾರು ಬನ್​ಗಳನ್ನು ಪ್ರಸಾದ ರೂಪದಲ್ಲಿ ವಿತರಿಸಿದ್ರು. ಫಾದರ್ ಶಾಂತರಾಜ್ ಸೇರಿದಂತೆ ವಿವಿಧ ಚರ್ಚ್​ಗಳಿಂದ ಆಗಮಿಸಿದ್ದ 30 ಕ್ಕೂ ಹೆಚ್ಚು ಧರ್ಮ ಗುರುಗಳು ಬಲಿ ಪೂಜೆ ನೆರವೇರಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv