ಸಿಸಿಟಿವಿಯಲ್ಲಿ ಕಳ್ಳಿಯ ಕೈ ಚಳಕ ಸೆರೆ, 10 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಬಾಗಲಕೋಟೆ: ಹೋಟೆಲ್​ಗೆ ಉಪಹಾರಕ್ಕೆ ಹೋದ ಸಂದರ್ಭದಲ್ಲಿ, ಮಹಿಳೆಯೊಬ್ಬಳು ನಗರದ ಬಸವರಾಜ ಗೌಡ ಎಂಬವರ ಚಿನ್ನಾಭರಣ ಎಗರಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ನಗರದಲ್ಲಿ ಜೂನ್ 24 ರಂದು ಘಟನೆ ನಡೆದಿತ್ತು, ಅದ್ರೆ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ನಿವಾಸಿಯಾಗಿರುವ ಬಸವರಾಜ ಗೌಡ, ಸಂಬಂಧಿಕರ ಮದುವೆಯ ಹಿನ್ನೆಲೆಯಲ್ಲಿ 28 ತೊಲ ಬಂಗಾರವನ್ನು ತೊಟ್ಟು ಹೊರಟಿದ್ದರು. ಈ ವೇಳೆ ಲೋಕಾಪುರ ನಗರದ ‘ಶಾಂತಿ ಪ್ರೀಯಾ ಹೋಟೆಲ್’​ಗೆ ಊಟಕ್ಕೆ ತೆರಳಿದ್ದರು. ಇದೇ ಹೋಟೆಲ್​ಗೆ ಆಗಮಿಸಿದ್ದ ಚಾಲಾಕಿ ಕಳ್ಳಿಯೊಬ್ಬಳು ಅವರ ಚಿನ್ನಾಭರಣ ಎಗರಿಸಿದ್ದಾಳೆ. ಚಿನ್ನಾಭರಣ 10 ಲಕ್ಷ ರೂಪಾಯಿ ಮೌಲ್ಯದ್ದು ಎನ್ನಲಾಗ್ತಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಈ ವರೆಗೂ ಕಳ್ಳಿಯ ಪತ್ತೆಯಾಗಿಲ್ಲ. ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv