ಗ್ರಹಚಾರ ಕೆಟ್ಟಿದ್ರೆ..ಒಮ್ಮೊಮ್ಮೆ ಹೀಗೆಲ್ಲಾ ಆಗುತ್ತೆ ನೋಡಿ

ಕೆನಡಾ:​ ಗ್ರಹಚಾರ ಕೆಟ್ಟಿದ್ರೆ ಶನಿ ಜೊತೆಗೆ ರಾಹುನೂ ಅಟ್ಕಾಯಿಸ್ಕೊಳ್ತಾನೆ ಅನ್ನೋದಕ್ಕೆ ವಿದೇಶದಲ್ಲಿ ನಡೆದ ಕಳ್ಳ ಪೊಲೀಸ್​ ಆಟವೇ ಸಾಕ್ಷಿ. ಅಲ್ಬೆರ್ಟಾದ ಸೂಪರ್ ಮಾರ್ಕೆಟ್​ವೊಂದರಲ್ಲಿ ವ್ಯಕ್ತಿಯೊಬ್ಬ ಕದ್ದ ಕ್ರೆಡಿಟ್​ ಕಾರ್ಡ್​​ನಿಂದ ವಸ್ತುಗಳನ್ನ ಖರೀದಿಸ್ತಿದ್ದ ಎನ್ನುವುದನ್ನ ಅಲ್ಲಿನ ಮಾಲೀಕ ಪತ್ತೆ ಹಚ್ಚಿದ್ದ. ಅಲ್ಲದೆ ಈ ಸಂಬಂಧ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಇನ್ನೇನು ಕಳ್ಳನ ಕರಾಮತ್ತು ಮುಗಿಬೇಕು ಎನ್ನುವಷ್ಟರಲ್ಲಿ, ಅಲ್ಲಿಗೆ ಅಷ್ಟೆಬೇಗ ಪೊಲೀಸರು ಎಂಟ್ರಿಕೊಟ್ಟಿದ್ರು.ಆಗ ಅಲ್ಲಿ ಶುರುವಾಯ್ತು ನೋಡಿ ಕಳ್ಳ ಪೊಲೀಸರ ಆಟ.
ತಮ್ಮನ್ನ ಹಿಡಿಯಲು ಬಂದ ಪೊಲಿಸ್ರ​ ಎದುರು ತನ್ನ ಗರ್ಲ್​​ಫ್ರೆಂಡ್​ನ್ನೆ ನೂಕಿದ ಕ್ರೆಡಿಟ್​ ಕಾರ್ಡ್​ ಕಳ್ಳ, ಬಟ್ಟೆ ಬಿಚ್ಚಿ ಓಡಲು ಹೊರಡಿದ್ದಾನೆ. ಎಲ್ಲೂ ಹೋಗೋದಕ್ಕೆ ಜಾಗಸಿಗದಿದ್ದಾಗ ಸೂಪರ್​ ಮಾರ್ಕೆಟ್​ನಲ್ಲಿಯೇ ಜೂಟಾಟ ಆಡಿದ್ದಾನೆ. ಯಾವಾಗ ಪೊಲೀಸರಿಗೆ ಇದೆಲ್ಲಾ ಅತಿ ಏನಿಸಿತೋ ಹಣೆ ಗನ್​ ಇಟ್ಟು ಶರಣಾಗು ಎಂದಿದ್ದಾರೆ.

ಇದು ಈತನ ಕಥೆಯಾದರೆ ಮತ್ತೊಂದು ಕಡೆ, ಈತನ ಗರ್ಲ್​ಫ್ರೆಂಡ್​ ಪೊಲೀಸರಿಂದ ತಪ್ಪಿಸಿಕೊಳ್ಳಬೇಕು ಅಂಥಾ ರೂಫ್​ನಲ್ಲಿ ಮಾಡಿರೋ ಡೆಕ್​ನಲ್ಲಿ ಅಡಗಿ ಕುಳಿತಿದ್ದಳು. ಆದರೆ ಕೂತಿದ್ದ ಡೆಕ್​ ಮುರಿದಿದ್ದರಿಂದ, ಆಕೆ ಅಲ್ಲಿದ್ದ ಸೆಲ್ಫ್​ ಮೇಲೆ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಅಲ್ಲಿಗೆ ಕಳ್ಳಪೊಲೀಸ್ ಆಟಕ್ಕೆ ತೆರೆಬಿದ್ದಿದೆ.