ರೂಲ್ಸ್​ ಬ್ರೇಕ್ ಮಾಡೋ ವಾಹನ ಸವಾರರೇ ಜೋಕೆ, ಕ್ಯಾಮರಾ ಕಣ್ಣಿದೆ

ಕೊಪ್ಪಳ: ಕೊಪ್ಪಳ ನಗರದಲ್ಲಿ ಟ್ರಾಫಿಕ್​​ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಡಲು ಪೊಲೀಸ್​ ಇಲಾಖೆ ಮುಂದಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು ತಪ್ಪಿಸಿಕೊಳ್ಳದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಕೊಪ್ಪಳದ ಬಸ್ ನಿಲ್ದಾಣ ಮತ್ತು ಹೊಸಪೇಟೆ ರಸ್ತೆಯ ಎಸ್​​.ಎಫ್.ಎಸ್ ಖಾಸಗಿ ಶಾಲೆ ಬಳಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.
ಕೊಪ್ಪಳ ನಗರದಲ್ಲಿ ಅಪಘಾತಗಳು ನಡೆಯುತ್ತಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಚಾಲಕರು ಎಸ್ಕೇಪ್ ಆಗುತ್ತಿದ್ದರು. ಅಲ್ಲದೇ ನಗರದಲ್ಲಿ ಟ್ರಾಫಿಕ್ ರೂಲ್ಸ್ ಅತೀ ಹೆಚ್ಚು ಬ್ರೇಕ್ ಆಗುತ್ತಿವೆ. ಇದನ್ನು ನಿಯಂತ್ರಿಸಲು ಈಗ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಮುಂದಾಗಿದೆ. 60 ಮೀಟರ್​​​​​ವರೆಗೆ ವಾಹನಗಳ‌ ದೃಶ್ಯಗಳನ್ನು ಸೆರೆ ಹಿಡಿಯುವ ಸಾಮರ್ಥ್ಯವನ್ನು‌ ಈ ಕ್ಯಾಮರಾಗಳು ಹೊಂದಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv