ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ!

ಬೆಳಗಾವಿ: ನಿನ್ನೆ ರಸಗೊಬ್ಬರದ ಅಂಗಡಿಯಲ್ಲಿ ನಡೆದ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖದೀಮರ ಕೈಚಳಕ ಬಯಲಾಗಿದೆ. ನಿನ್ನೆ ಮುಂಜಾನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ರಾಜಾಪುರ ಗ್ರಾಮದಲ್ಲಿರುವ ರಸಗೊಬ್ಬರದ ಅಂಗಡಿಗೆ ಕನ್ನ ಹಾಕಿದ್ದ ಖದೀಮರು, 6 ಸಾವಿರ ನಗದು, 2 ಮೊಬೈಲ್‌ ಸೇರಿ‌ ಬೆಲೆ ಬಾಳುವ ವಸ್ತುಗಳನ್ನ ಕದ್ದೊಯ್ದಿದ್ದರು. ಅಂಗಡಿ ಮಾಲೀಕರಾದ ಸಂಜೀವ ಬೈರಗೊಳ ಅವರು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಿಸಿಟಿವಿ ದೃಶ್ಯ ಆಧಾರಿಸಿ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv