ರಕ್ತಚಂದನ ಸ್ಮಗ್ಲರ್ಸ್ ಅಡ್ಡೆ ಮೇಲೆ ಅಲೋಕ್ ಕುಮಾರ್​ ನೇತೃತ್ವದ ಟೀಂ ದಾಳಿ ​

ಬೆಂಗಳೂರು: ರಕ್ತಚಂದನ ಸ್ಮಗ್ಲರ್ಸ್ ಅಡ್ಡೆ ಮೇಲೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಮಾಲೂರಿನ ಕೊಟ್ಟಿಗೆ ಪಾಳ್ಯದಲ್ಲಿ ತಡರಾತ್ರಿ ದಾಳಿ ನಡೆಸಿದ ಪೊಲೀಸರ ತಂಡ, ಅಪಾರ ಪ್ರಮಾಣದ ರಕ್ತಚಂದನ ಮರದ ತುಂಡುಗಳನ್ನ ವಶಕ್ಕೆ ಪಡೆದುಕೊಂಡಿದೆ. ಕೇಂದ್ರ ವಿಭಾಗ ಡಿಸಿಪಿ ದೇವರಾಜು, ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹಾದ್, ಸಿಸಿಬಿ ಡಿಸಿಪಿ ಗಿರೀಶ್ ಸೇರಿದಂತೆ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ರು. ಕಳೆದ ಜನವರಿಯಲ್ಲಿ ಡಿಸಿಪಿಗಳಾದ ಅಬ್ದುಲ್ ಅಹಾದ್ ಹಾಗೂ ದೇವರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ‌ಬಾರಿ ದಾಳಿಗೆ ಖುದ್ದು ಅಲೋಕ್ ಕುಮಾರ್ ಅವರೇ ನೇತೃತ್ವ ವಹಿಸಿದ್ದರು.


Follow us on: 

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv