ಕನಕಪುರ ತಾಲ್ಲೂಕು ಕಚೇರಿ ಮೇಲೆ ಸಿಬಿಐ ದಾಳಿ

ರಾಮನಗರ: ಮತದಾರರ ಗುರುತಿನ ಚೀಟಿಯ ಸ್ಟಿಕ್ಕರ್​ಗಳ ದುರುಪಯೋಗ ಹಿನ್ನೆಲೆಯಲ್ಲಿ ಕನಕಪುರ ತಾಲ್ಲೂಕು ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 8 ಸಿಬಿಐ ಅಧಿಕಾರಿಗಳನ್ನೊಳಗೊಂಡ ತಂಡವೊಂದು ಇಂದು ಬೆಳಗ್ಗೆಯೇ ತಾಲೂಕು ಚುನಾವಣಾ ಕಚೇರಿ ಮೇಲೆ ದಾಳಿ ನಡೆಸಿದ್ರು. ನಾಲ್ವರು ಅಧಿಕಾರಿಗಳು ಚುನಾವಣಾ ಕಚೇರಿಯಲ್ಲಿನ ಚುನಾವಣಾ ವಿಭಾಗದ ನಂಜಯ್ಯ ಹಾಗೂ ಕಂಪ್ಯೂಟರ್ ಅಪರೇಟರ್​ ಅನಿಲ್​ನನ್ನು ವಿಚಾರಣೆ ನಡೆಸುತಿದ್ರೆ, ಉಳಿದ ನಾಲ್ವರು ಕನಕಪುರದ ಶಿರೆಸ್ತೆದಾರ್ ಶಿವಾನಂದ್​ರನ್ನ ಕರೆದೊಯ್ದಿದ್ರು. ಅಲ್ಲದೇ ಬೇರೆ ಯಾವ ಅಧಿಕಾರಿಗಳಿಗೂ ಕಚೇರಿಯ ಒಳ ಪ್ರವೇಶಕ್ಕೆ ಸಿಬಿಐ ನಿರಾಕರಿಸಿದೆ. ಇದೀಗ ಮತ್ತೆ ತಾಲ್ಲೂಕು ಕಚೇರಿಗೆ ಶಿವಾನಂದ್​ರನ್ನ ಕರೆತಂದ ಸಿಬಿಐ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv