ಸಿಬಿಐ ಮಾಜಿ ನಿರ್ದೇಶಕ ಅಲೋಕ್​ ವರ್ಮಾ ರಾಜೀನಾಮೆ

ನವದೆಹಲಿ: ನಿನ್ನೆಯಷ್ಟೇ ಪ್ರಧಾನಿ ಮೋದಿ ನೇತೃತ್ವದ ಉನ್ನತಾಧಿಕಾರ ಸಮಿತಿಯ ಮೂಲಕ ಸಿಬಿಐ ನಿರ್ದೇಶಕ ಸ್ಥಾನದಿಂದ ಎತ್ತಂಗಡಿಯಾಗಿದ್ದ ಅಲೋಕ್​ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವರ್ಮಾ ಅವರನ್ನು ಸಿಬಿಐನಿಂದ ಎತ್ತಂಗಡಿ ಮಾಡಿ, ನಿನ್ನೆತಾನೇ ಅಗ್ನಿಶಾಮಕ ಸೇವೆ ಪ್ರಧಾನ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.

ಹೊಸ ಹುದ್ದೆಯನ್ನು ತಾನು ಅಲಂಕರಿಸುವುದಿಲ್ಲ ಎಂದು ತಿಳಿಸಿದ ಹಿರಿಯ IPS ಅಧಿಕಾರಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ರಾಜೀನಾಮೆ ಸಲ್ಲಿಸಿದ್ದಾರೆ. ನಾನು 2017ರ ಜುಲೈ 31 ರಂದೇ ಸೂಪರ್​ಆನ್ಯುಯೇಶನ್​ ಆಗಬೇಕಿತ್ತು. ಅದಾಗ್ಯೂ 2019ರ ಜನವರಿ 3ರವರೆಗೂ ನಾನು ಸಿಬಿಐನಲ್ಲಿ ಅಧಿಕಾರದಲ್ಲಿದ್ದೆ ಅಷ್ಟೇ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.